ಹುಡುಕಿ

ಗಾಜಾದಲ್ಲಿನ ಮಹಿಳೆಯರು ಹಾಗೂ ಮಕ್ಕಳ ನರಮೇಧವನ್ನು ಖಂಡಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸಕಲಸಂತರ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಮಾತನಾಡಿದರು. ವಿಶೇಷವಾಗಿ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಮಾತನಾಡಿದ ಅವರು ಅಲ್ಲಿ ಮಹಿಳೆಯರು ಹಾಗೂ ಮಕ್ಕಳ ನರಮೇಧ ಆಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ವರದಿ: ಫ್ರಾನ್ಸಿಸ್ಕ ಮೆರ್ಲೊ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸಕಲಸಂತರ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಮಾತನಾಡಿದರು. ವಿಶೇಷವಾಗಿ ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಮಾತನಾಡಿದ ಅವರು ಅಲ್ಲಿ ಮಹಿಳೆಯರು ಹಾಗೂ ಮಕ್ಕಳ ನರಮೇಧ ಆಗುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು ಯುದ್ಧ ಎಂದಿಗೂ ಸೋಲೇ ಆಗಿದೆ. ಇದರಿಂದ ಜೀವಗಳು ತಮ್ಮದಲ್ಲದ ತಪ್ಪಿಗೆ ನಾಶವಾಗುತ್ತಿವೆ. ಯುದ್ಧ ಎಂಬುದು ಸತ್ಯದ ಮೇಲೆ ಅಸತ್ಯದ ಗೆಲುವಾಗಿದೆ. ಆದುದರಿಂದ ಯಾವುದೇ ಕಾರಣಕ್ಕೂ ಯುದ್ಧ ನಮಗೆ ಆಯ್ಕೆಯಾಗಬಾರದು. ಯುದ್ಧವನ್ನು ಎಲ್ಲರೂ ಖಂಡಿಸಬೇಕು ಹಾಗೂ ನಿಲ್ಲಿಸುವಂತೆ ಒತ್ತಾಯವನ್ನು ಮಾಡಬೇಕು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಮ್ಯಾನ್ಮಾರ್ ಹಾಗೂ ಉಕ್ರೇನ್ ದೇಶಗಳನ್ನು ಸಹ ಇಲ್ಲಿ ನೆನಪಿಸಿಕೊಂಡರು.

ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಪೋಪ್ ಫ್ರಾನ್ಸಿಸ್ ಅವರು ಚಾಡ್ ದೇಶದಲ್ಲಿ ನಡೆದಿರುವ ಉಗ್ರ ದಾಳಿಯ ಕುರಿತು ಮಾತನಾಡಿ, ಅದರಲ್ಲಿ ಮಡಿದವರ ಆತ್ಮ ಶಕ್ತಿ ಗಾಗಿ ಪ್ರಾರ್ಥಿಸಿದರು. ಇದೆ ವೇಳೆ ಅವರು, ಇಟಲಿ ದೇಶದ ವಾಲೆನ್ಸಿಯ ನಗರದಲ್ಲಿ ಉಂಟಾದ ಬಿರುಗಾಳಿಯಿಂದ ಮೃತಪಟ್ಟ ವ್ಯಕ್ತಿಗಳನ್ನು ನೆನಪಿಸಿಕೊಂಡರು ಹಾಗೂ ಇದರಿಂದ ತೊಂದರೆ ಆಗಿರುವ ಎಲ್ಲರ ಜೊತೆಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದರು.

ಅಂತಿಮವಾಗಿ ಈ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಕೊನೆಗೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.

01 November 2024, 17:49