ಸಾರ್ವಜನಿಕ ಭೇಟಿಯಲ್ಲಿ ಪೋಪ್: ನಾವು ಪ್ರಾರ್ಥಿಸುವಾಗ ಪವಿತ್ರಾತ್ಮರು ನಮ್ಮ ನೆರವಿಗೆ ಧಾವಿಸುತ್ತಾರೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ರೋಮ್ ನಗರದಲ್ಲಿ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಮಾತನಾಡುವಾಗ ಅವರು ಪವಿತ್ರಾತ್ಮರ ಕುರಿತ ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದ್ದು, ನಾವು ಪ್ರಾರ್ಥಿಸುವಾಗ ಪವಿತ್ರಾತ್ಮರು ನಮ್ಮ ನೆರವಿಗೆ ಧಾವಿಸುತ್ತಾರೆ ಎಂದು ಹೇಳಿದ್ದಾರೆ.
"ಕ್ರೈಸ್ತ ಪ್ರಾರ್ಥನೆ ಎಂದರೆ ಒಂದು ಬದಿಯಿಂದ ಮತ್ತೊಂದು ಬದಿಗೆ ಫೋನ್ ಮಾಡುವಂತೆ ಅಲ್ಲ. ನಾವು ಈ ಬದಿಯಿಂದ ಆ ದೇವರಿಗೆ ಫೋನ್ ಮಾಡಿ, ಮಾತನಾಡುವುದಲ್ಲ. ಬದಲಿಗೆ ದೇವರು ನಮ್ಮಲ್ಲಿ ಪ್ರಾರ್ಥಿಸುತ್ತಾರೆ. ಪ್ರಾರ್ಥನೆ ಎಂದರೆ ದೇವರೊಂದಿಗೆ ದೇವರಿಗೆ ಮಾಡುವ ಅರಿಕೆಯಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ, ಅವರಿಗೆ ಪ್ರಾರ್ಥನೆಯ ಮಹತ್ವವನ್ನು ತಿಳಿಸಿದರು.
"ದೇವರ ವಾಕ್ಯ ಹಾಗೂ ಸಂಸ್ಕಾರಗಳಲ್ಲಿ ಹೊರತುಪಡಿಸಿ, ಪವಿತ್ರಾತ್ಮರ ಪವಿತ್ರ ಕಾರ್ಯಗಳನ್ನು ನಾವು ಪ್ರಾರ್ಥನೆಯಲ್ಲಿ ಕಾಣ ಬಹುದಾಗಿದೆ" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, ಈ ಕಾರಣಕ್ಕಾಗಿಯೇ ಅವರ ಚಿಂತನೆಯನ್ನು ಇದರ ಮೇಲೆ ಕೇಂದ್ರಿಕರಿಸಲು ಇಚ್ಛಿಸಿದರು ಎಂದು ಹೇಳುತ್ತಾರೆ.
"ಹೌದು, ನಮಗೆ ಪ್ರಾರ್ಥನೆ ಮಾಡಲು ಬರುವುದಿಲ್ಲ. ಈ ಸಂದರ್ಭದಲ್ಲಿ ಪವಿತ್ರಾತ್ಮರು ನಮಲ್ಲಿಗೆ ಬಂದು, ನಮ್ಮನ್ನು ಅಣಿಗೊಳಿಸಿ, ನಾವು "ಅಪ್ಪಾ ತಂದೆಯೇ" ಎನ್ನುವಂತೆ ಮಾಡುತ್ತಾರೆ ಹಾಗೂ ನಮಗೆ ಪ್ರಾರ್ಥನೆಯನ್ನು ಕಲಿಸುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.