2024.11.07 Ufficiali e Militari del Comando Trasporti e Materiali

ಮಾನವೀಯ ಭಿಕ್ಕಟ್ಟುಗಳಲ್ಲಿ ನೆರವಾಗುವ ಇಟಲಿಯ ಯೋಧರಿಗೆ ಧನ್ಯವಾದ ಅರ್ಪಿಸಿದ ಪೋಪ್ ಫ್ರಾನ್ಸಿಸ್

ವಿಶ್ವಗುರು ಫ್ರಾನ್ಸಿಸ್ ಅವರು ಇತರರಿಗೆ ಸೇವೆ ಮಾಡುವುದು ನಮಗೆ ಘನತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ನಾವು ಸೇವೆ ಮಾಡಿದರೆ ನಮ್ಮ ಬದುಕಿಗೆ ಘನತೆಯನ್ನು ತಂದುಕೊಳ್ಳುತ್ತೇವೆ ಎಂದು ಅರ್ಥ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಇಟಲಿಯ ಸುಮಾರು  400 ಜನ ಯೋಧರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಯೋಧರು ಮಾನವೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ  ಜನರಿಗೆ ನೆರವಾಗುವುದಕ್ಕೆ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಇದು ಕ್ರಿಸ್ತೀಯ ಸೇವೆಯ ಭಾಗವಾಗಿದೆ ಹಾಗೂ ನಿಮ್ಮ ಪಾಲಕ ಸಂತರಾದ ಸಂತ ಕ್ರಿಸ್ಟೋಫರ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ.

ಯೋಧರ ಪಾಲಕ ಸಂತರಾದ ಸಂತ ಕ್ರಿಸ್ಟೋಫರ್ ಅವರ ಜೀವನದ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಸಂತಕೃಷ್ಟಪರವರು ಧೈರ್ಯ ಹಾಗೂ ಸೇವೆಗೆ ಮಾದರಿಯಾಗಿದ್ದಾರೆ ಅವರ ಮಾದರಿಯಂತೆ ನೀವು ಸಹ ಜನರಿಗೆ ಅವರ ಸಂಕಷ್ಟಗಳಲ್ಲಿ ನೆರವಾಗುತ್ತಿದ್ದೀರಿ ಇದಕ್ಕೆ ನಾನು ನಿಮಗೆ ಧನ್ಯವಾದಗಳು. ನೀವು ಸಾರ್ವಜನಿಕರಿಗೆ ಮಾಡುತ್ತಿರುವ ಅತ್ಯುನ್ನತ ಸೇವೆಯಾಗಿದೆ ಎಂದು ಅವರ ಕಾರ್ಯವನ್ನು ವಿಶ್ವಗುರು ಫ್ರಾನ್ಸಿಸ್ ಅವರು ಶ್ಲಾಘಿಸಿದ್ದಾರೆ.

ಮುಂದುವರೆದು ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು ಇತರರಿಗೆ ಸೇವೆ ಮಾಡುವುದು ನಮಗೆ ಘನತೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಸಹೋದರ ಸಹೋದರಿಯರಿಗೆ ನಾವು ಸೇವೆ ಮಾಡಿದರೆ ನಮ್ಮ ಬದುಕಿಗೆ ಘನತೆಯನ್ನು ತಂದುಕೊಳ್ಳುತ್ತೇವೆ ಎಂದು ಅರ್ಥ ಎಂದು ಹೇಳಿದ್ದಾರೆ.

"ಕ್ರಿಸ್ಟೊಫರ್ ಎಂದರೆ ಕ್ರಿಸ್ತನನ್ನು ಹೊರುವವನು ಎಂದು ಅರ್ಥ" ಎಂದು ಹೇಳಿದ ವಿಶ್ವಗುರು ಫ್ರಾನ್ಸಿಸ್ ಅವರು, ಅವರ ಹಾದಿಯಲ್ಲಿ ಸೇವೆಯ ಮೂಲಕ ಕ್ರಿಸ್ತರನ್ನು ನಾವು ಹೊರಬೇಕಿದೆ ಎಂದು ಹೇಳಿದರು.

07 November 2024, 17:08