ಪೋಪ್ ಫ್ರಾನ್ಸಿಸ್: ಪ್ರೀತಿಪಾತ್ರರು ವಿಶ್ವಾಸವನ್ನು ತೊರೆದಾಗ ಎದೆಗುಂದ ಬೇಡಿ
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ತನ್ನ ಮೊಮ್ಮಗಳಿಗೆ ದೀಕ್ಷಾಸ್ನಾನವನ್ನು ಆಕೆಯ ತಂದೆ ತಾಯಿಗಳು ನೀಡಲು ನಿರಾಕರಿಸಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಇಟಲಿಯ ವೃದ್ಧೆಯೊಬ್ಬರು ಪತ್ರವನ್ನು ಬರೆದಿದ್ದಾರೆ. ಇದನ್ನೆಲ್ಲ ಕಂಡು ಯೇಸುಕ್ರಿಸ್ತರು ಏನೆಂದುಕೊಳ್ಳುತ್ತಾರೆ ಎಂದು ಆಕೆ ಕೇಳಿರುವ ಪ್ರಶ್ನೆಗೆ ವಿಶ್ವಗುರು ಫ್ರಾನ್ಸಿಸ್ ಅವರು ಉತ್ತರಿಸಿದ್ದಾರೆ.
"ಬೇರ್ಗಾಮೋ ಇಂದ ಒಲಿವ" ಎಂಬ ಒಕ್ಕಣೆಯುಳ್ಳ ಪತ್ರವನ್ನು ಸೈಂಟ್ ಪೀಟರ್ಸ್ ಸ್ಕ್ವೇರ್ ಮಾಸಪತ್ರಿಕೆ ಪ್ರಕಟಿಸಿತ್ತು. ತನ್ನ ಮಗಳು ಹಾಗೂ ಅಳಿಯ ಮೊಮ್ಮಗಳಿಗೆ ದೀಕ್ಷಾಸ್ನಾನ ನೀಡಲು ನಿರಾಕರಿಸುವುದನ್ನು ಕಂಡು ನನಗೆ ಬೇಸರವಾಗುತ್ತಿದೆ ಎಂದು ಅವರು ಈ ಪತ್ರದಲ್ಲಿ ಬರೆದಿದ್ದಾರೆ.
ಇದಕ್ಕೆ ಉತ್ತರಿಸಿರುವ ವಿಶ್ವಗುರು ಫ್ರಾನ್ಸಿಸರು "ದೀಕ್ಷಾಸ್ನಾನ ಎಂಬುದು ದೇವರ ಕೃಪೆಯಾಗಿದೆ. ಇದು ಇದು ಕ್ರೈಸ್ತ ಬದುಕಿನಲ್ಲಿ ಜೀವಿಸಲು ಅವಶ್ಯಕತೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ನಿಮ್ಮ ಪರಿಸ್ಥಿತಿಯು ಸಹ ನನಗೆ ಚೆನ್ನಾಗಿ ಅರ್ಥವಾಗಿದೆ. ನಾನು ವಿಶ್ವಗುರು ಆದ ನಂತರ ಅನೇಕ ಮಕ್ಕಳಿಗೆ ದೀಕ್ಷಾಸ್ನಾನವನ್ನು ನೀಡಿದ್ದು ದೀಕ್ಷಾಸ್ನಾನ ಎಂಬುದು ಸಂಭ್ರಮದ ಸುದಿನವಾಗಿದೆ ಎಂದು ವಿಶ್ವ ಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ದೀಕ್ಷಾಸ್ನಾನವನ್ನು ತಮ್ಮ ಮಗುವಿಗೆ ನೀಡುವುದು ಅಥವಾ ನೀಡದೆ ಇರುವುದು ತಂದೆ ತಾಯಿಗಳ ಸ್ವಾತಂತ್ರ್ಯವಾಗಿದೆ. ನಾವು ಅವರ ಮಕ್ಕಳಿಗೆ ದೀಕ್ಷಾಸ್ನಾನ ನೀಡಲೇ ಬೇಕು ಎಂದು ಒತ್ತಾಯ ಮಾಡುವಂತಿಲ್ಲ. ಯಾರೂ ಸಹ ಆ ರೀತಿ ಒತ್ತಾಯ ಮಾಡಬಾರದು. ಇಲ್ಲಿ ನಾವು ಸಂತ ಮೋನಿಕಮ್ಮನವರ ವಿಶ್ವಾಸವನ್ನು ಸ್ಮರಿಸಿಕೊಳ್ಳಬೇಕು. ಅವರಂತೆ ನಮ್ಮ ಪ್ರೀತಿ ಪಾತ್ರರ ಮನಪರಿವರ್ತನೆಗಾಗಿ ಪ್ರಾರ್ಥಿಸಬೇಕು" ಎಂದು ಹೇಳಿದ್ದಾರೆ.
"ನಮ್ಮ ನಿರಂತರ ಪ್ರಾರ್ಥನೆಗಳ ಮೂಲಕ ಮಾತ್ರವೇ ನಾವು ಅವರನ್ನು ವಿಶ್ವಾಸಕ್ಕೆ ಮರಳಿ ಬರುವಂತೆ ಮಾಡಬಹುದು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.