ಇಟಲಿಯ ಸಂಸದರೊಬ್ಬರ ಮನೆಗೆ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಗ್ರೆಗೋರಿಯನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ, ಮಾರ್ಗ ರೋಮ್ ನಗರದ ಮಧ್ಯ ಭಾಗದಲ್ಲಿರುವ ಇಟಲಿಯ ಮಾಜಿ ಸಚಿವೆ ಹಾಗೂ ಸಂಸದೆ ಎಮ್ಮಾ ಬೊನೊನೊ ಅವರ ಮನೆಗೆ ಆಶ್ಚರ್ಯಕರ ಭೇಟಿಯನ್ನು ನೀಡಿದ್ದು, ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಎಮ್ಮಾ ಬೊನಿನೋ ಅವರು ವಯೋ ಸಹಜ ಖಾಯಿಲೆಗಳಿಂದ ನರಳುತ್ತಿದ್ದು, ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು.
ಪೋಪ್ ಫ್ರಾನ್ಸಿಸ್ ಅವರು ಎಮ್ಮಾ ಬೊನಿನೊ ಅವರ ಮನೆಗೆ ಭೇಟಿ ನೀಡಿ ವಾಪಾಸ್ಸು ತೆರಳುತ್ತಿದ್ದ ವೇಳೆ, ಜನರು ಎಮ್ಮಾ ಅವರ ಕುರಿತು ಕೇಳಿದ ಪ್ರಶ್ನೆಗೆ ಪೋಪ್ ಫ್ರಾನ್ಸಿಸ್ ಅವರು "ಆಕೆ ಚೆನ್ನಾಗಿದ್ದಾರೆ, ಎಂದಿನಂತೆ" ಎಂದು ಹೇಳಿದರು.
2015 ರಲ್ಲಿ ಪೋಪ್ ಫ್ರಾನ್ಸಿಸ್ ಹಾಗೂ ಎಮ್ಮಾ ಬೊನಿನೋ ಅವರು ಬಹಳಷ್ಟು ಬಾರಿ ಸಂಧಿಸಿದ್ದು, ಎಮ್ಮಾ ಅವರು ಬುಧವಾರದ ಸಾರ್ವಜನಿಕ ಭೇಟಿಯಲ್ಲಿ ಭಾಗವಹಿಸಿದ್ದರು. ರೋಮ್ ನಗರದ ನಿರಾಶ್ರಿತ ಮಕ್ಕಳ ಯೊಜನೆಯೊಂದರಲ್ಲಿ ಇವರು ವ್ಯಾಟಿಕನ್ನಿನ ಜೊತೆಗೂಡಿ, ಜಂಟಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಎಮ್ಮಾ ಬೊನಿನೋ ಅವರು ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾರೆ.