ಪೋಪ್ ಫ್ರಾನ್ಸಿಸ್: ಪರಮಾಣು ಯುದ್ಧದ ಛಾಯೆ ಆವರಿಸುತ್ತಿರುವ ಹೊತ್ತಿನಲ್ಲಿ ವಿಶ್ವದಲ್ಲಿ ಎಲ್ಲಾ ಭಕ್ತಾದಿಗಳು ಶಾಂತಿಗಾಗಿ ಪ್ರಾರ್ಥಿಸಬೇಕು
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ವ್ಯಾಟಿಕಣ್ಣಿನ ಅಂತರ್ಧರ್ಮೀಯ ಸಂವಾದ ಆಯೋಗ ಹಾಗೂ ಇರಾನಿನ ಅಂತರ್-ಸಾಂಸ್ಕೃತಿಕ ಸಂವಾದ ಕೇಂದ್ರದ ಸದಸ್ಯರನ್ನು ಉದ್ದೇಶಿಸಿ ವ್ಯಾಟಿಕನ್ ನಗರದಲ್ಲಿ ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಎಲ್ಲಾ ಧರ್ಮಗಳ ಭಕ್ತಾದಿಗಳಾಗಿರುವ ನಾವು ವಿಶ್ವದಲ್ಲಿ ಶಾಂತಿ ಮತ್ತೆ ನೆಲೆಸುವುದು ಪ್ರಾರ್ಥಿಸಬೇಕು ಎಂದು ಹೇಳಿದರು. ದಿನೇ ದಿನೇ ಯುದ್ಧಗಳು ಹೆಚ್ಚುತ್ತಿರುವ ಪರಿಣಾಮ ಪರಮಣು ಯುದ್ಧ ಎಂಬುದು ಯಾವ ಸಮಯದಲ್ಲಾದರೂ ನಡೆಯಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿರುವ ಅವರು, ಇದಕ್ಕೆ ನಾವು ಸದಾ ಪ್ರಾರ್ಥಿಸುವುದೇ ಪರಿಹಾರ ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಇಂದು ಸಾರ್ವಜನಿಕರನ್ನು ಭೇಟಿ ಮಾಡುತ್ತಾ ಯುದ್ಧದ ಕುರಿತು ಮಾತನಾಡಿದ್ದಾರೆ. ಯುದ್ಧ ಎಂಬುದು ಎರಡೂ ಕಡೆಗಳ ಸೋಲಾಗಿದ್ದು, ಇದರ ಮೊದಲ ಗುರಿಯೇ ಮಕ್ಕಳನ್ನು ಹಾಗೂ ಕುಟುಂಬಗಳನ್ನು ನಾಶ ಮಾಡುವುದು ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು ವಿಶ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ರೀತಿಯ ಯುದ್ಧಗಳು ಕೊನೆಗೊಂಡು, ಶಾಂತಿ ಸ್ಥಾಪಿಯವಾಗಲಿ ಎಂದು ಹೇಳುವ ಮೂಲಕ ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಛರಿಸಿದ್ದಾರೆ.
ಗಾಝಾ ಸೇರಿದಂತೆ ಯುದ್ಧದ ದಾಳಿಗೆ ಒಳಗಾಗಿರುವ ಪ್ರದೇಶಗಳ ಕುರಿತು ಪೋಪ್ ಫ್ರಾನ್ಸಿಸ್ ಮಾತನಾಡಿದರು. ಈ ವೇಳೆ ಅವರು ಯಾವುದೇ ಯುದ್ಧದಲ್ಲಿ ಸಾಕಷ್ಟು ಹಿಂಸೆ ಹಾಗೂ ನೋವುಗಳನ್ನು ಅನುಭವಿಸುವುದು ಮುಗ್ಧ ಜನರಾಗಿದ್ದಾರೆ. ವಿಶೇಷವಾಗಿ ಮಕ್ಕಳು ಯುದ‌್ಧಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುದ್ಧದಿಂದ ಭಾಧಿತವಾಗಿರುವ ಪ್ರದೇಶಗಳಿಗೆ ಅಗತ್ಯವಾಗಿ ಮಾನವೀಯ ನೆರವು ದಕ್ಕಬೇಕು" ಎಂದು ಹೇಳಿದ್ದಾರೆ.