ಭಗಿನಿಯರಿಗೆ ಪೋಪ್ ಫ್ರಾನ್ಸಿಸ್: ದುಃಖದ ಸಂತರು ದುಃಖವನ್ನೇ ತರುವ ಸಂತರಾಗುತ್ತಾರೆ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಗುರುವಾರ ವ್ಯಾಟಿಕನ್ ನಗರದಲ್ಲಿ ಧಾರ್ಮಿಕ ಸಹೋದರ ಸಹೋದರಿಯನ್ನು ಭೇಟಿ ಮಾಡಿದರು. ಈ ವೇಳೆ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲರೂ ಸಂತರಾಗಲು ಪ್ರಯತ್ನಿಸಬೇಕು. ಉಲ್ಲಾಸ ಹಾಗೂ ಸಂತೋಷದ ಸಂತರಾಗಬೇಕು ಏಕೆಂದರೆ ದುಃಖದ ಸಂತರು ಎಂದಿಗೂ ದುಃಖವನ್ನು ತರುವ ಸಂತರಾಗಿರುತ್ತಾರೆ ಎಂದು ಹೇಳಿದರು.
"ಪಾವಿತ್ರ್ಯತೆ ಎಂಬುದು ಸದಾ ಸಂತೋಷವಾಗಿರುತ್ತದೆ. ಅಂತಹ ಹೃದಯದ ಸಂತೋಷವನ್ನು ನೀವು ನಿಮ್ಮ ಧಾರ್ಮಿಕ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಸ್ಪೇನ್ ದೇಶದ ಸಂತ ಅಗುಸ್ತೀನ್ ಸಭೆಯ ಧಾರ್ಮಿಕ ಸಹೋದರ ಸಹೋದರಿಯರಿಗೆ ಕಿವಿಮಾತನ್ನು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಧಾರ್ಮಿಕ ಜೀವನದಲ್ಲಿ ಗುರುಗಳಾಗಲಿ ಅಥವಾ ಭಗಿನಿಯರಾಗಲಿ ಸಂತೋಷ ಹಾಗೂ ಉಲ್ಲಾಸವನ್ನು ಕಳೆದುಕೊಳ್ಳಬಾರದು. ಸದಾ ನಾವೆಲ್ಲರೂ ಹಸನ್ಮುಖರಾಗಬೇಕು ಎಂದು ಅವರಿಗೆ ಹೇಳಿದರು.
ಇದೇ ವೇಳೆ ಪೋಪ್ ಫ್ರಾನ್ಸಿಸರು ಇಟಲಿಯ ಸ್ಮೇನ್ ದೇಶದ ವ್ಯಾಲೆನ್ಸಿಯಾ ನಗರದಲ್ಲಿನ ಪ್ರವಾಹ ಸಂತ್ರಸ್ಥರಿಗಾಗಿ ಪ್ರಾರ್ಥಿಸುವಂತೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಕರೆ ನೀಡಿದರು.