ಶಿಕ್ಷಣ ಮಾನವ ಹೃದಯದ ಕಾಳಜಿಯನ್ನು ವಹಿಸಬೇಕು: ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳ ಗ್ಲೋಬಲ್ ಸಿಂಪೋಸಿಯಮ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಣ ಮಾನವ ಹೃದಯದ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು.

ವರದಿ: ಡೆಬೋರಾ ಕ್ಯಾಸ್ಟಿಲೀನೋ ಲುಬೋವ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ವಿವಿಧ ಶೈಕ್ಷಣಿಕ ಸಂಸ್ಥೆಗಳ ಗ್ಲೋಬಲ್ ಸಿಂಪೋಸಿಯಮ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಣ ಮಾನವ ಹೃದಯದ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು.

"ನಾವು ಒಮ್ಮೆ ತರಗತಿ ಅಥವಾ ಶಾಲಾ-ಕಾಲೇಜುಗಳನ್ನು ಬಿಟ್ಟ ನಂತರ ಕಲಿಕೆ ನಿಲ್ಲುತ್ತದೆ ಎಂಬ ಮನೋಭಾವ ಸರಿಯಲ್ಲ. ಶಿಕ್ಷಣ ಅಥವಾ ಕಲಿಕೆ ಎಂಬುದು ನಿರಂತರತೆಯಿಂದ ಕೂಡಿದ್ದು, ನಾವು ಎಲ್ಲಾ ಕಾಲದಲ್ಲಿಯೂ, ಎಲ್ಲಾ ಸಂದರ್ಭಗಳಲ್ಲಿಯೂ ಕಲಿಯುವವರಾಗಿದ್ದೇವೆ." ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. 

ಈ ವೇಳೆ ಆಫ್ರಿಕಾದ ಗಾದೆಯನ್ನು ಉದಾಹರಿಸಿದ ಪೋಪ್ ಫ್ರಾನ್ಸಿಸ್ ಅವರು "ಒಬ್ಬ ಮಗುವಿಗೆ ಶಿಕ್ಷಣವನ್ನು ನೀಡಲು ಇಡೀ ಗ್ರಾಮವೇ ಬೇಕಾಗುತ್ತದೆ" ಎಂದು ಹೇಳಿದರು. ಈ ವೇಳೆ ಅವರು ನಾವೆಲ್ಲರೂ ಸಹ ಈ ರೀತಿಯ ಶೈಕ್ಷಣಿಕ ಗ್ರಾಮವನ್ನು ಕಟ್ಟಲು ಸಹಕರಿಸಬೇಕು" ಎಂದು ನೆರೆದಿದ್ದ ಎಲ್ಲರಿಗೂ ಹೇಳಿದರು.

ಕಥೋಲಿಕ ಶಾಲೆಗಳ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು "ಕಥೋಲಿಕ ಶಾಲೆಗಳು ಧೈರ್ಯದಿಂದ ಇರಬೇಕು ಹಾಗೂ ಶಾಲೆಗಳಲ್ಲಿ ಅಂತರ್-ಧರ್ಮೀಯ ಸಂವಾದಗಳನ್ನು ಪ್ರೋತ್ಸಾಹಿಸಬೇಕು" ಎಂದು ಹೇಳಿದರು.

ಒಟ್ಟಾರೆಯಾಗಿ ಶಿಕ್ಷಣವನ್ನು ಮಾನವ ಹೃದಯದ ಕಾಳಜಿಗಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.   

09 November 2024, 15:53