ಮ್ಯಾನ್ಮಾರ್ ದೇಶದಲ್ಲಿ ಹಿಂಸೆ ನಿಲ್ಲಲು ಪೋಪ್ ಫ್ರಾನ್ಸಿಸ್ ಪ್ರಾರ್ಥನೆ

ಪೋಪ್ ಫ್ರಾನ್ಸಿಸ್ ಅವರು ಇಂದಿನ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಮ್ಯಾನ್ಮಾರ್ ದೇಶದಲ್ಲಿ ಹಿಂಸೆ ಎಂಬುದು ನಿಲ್ಲಬೇಕು ಎಂದು ಹೇಳಿದ್ದು, ಅಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಭಕ್ತಾಧಿಗಳಿಗೆ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಸಬಾತಿನೆಲ್ಲಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಇಂದಿನ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಮ್ಯಾನ್ಮಾರ್ ದೇಶದಲ್ಲಿ ಹಿಂಸೆ ಎಂಬುದು ನಿಲ್ಲಬೇಕು ಎಂದು ಹೇಳಿದ್ದು, ಅಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ ಹಾಗೂ ಭಕ್ತಾಧಿಗಳಿಗೆ ಪ್ರಾರ್ಥಿಸುವಂತೆ ಕರೆ ನೀಡಿದ್ದಾರೆ.  

ಈ ಆಂತರಿಕ ಯುದ್ಧ ಹಾಗೂ ಸಂಘರ್ಷದಿಂದ ಹೆಚ್ಚಿನ ಹಿಂಸೆ ಹಾಗೂ ನೋವನ್ನು ಅನುಭವಿಸುತ್ತಿರುವುದು ಅಲ್ಲಿನ ಮುಗ್ಧ ಮಕ್ಕಳು ಎಂದು ಹೇಳಿರುವ ವಿಶ್ವಗುರು ಫ್ರಾನ್ಸಿಸ್ ಅವರು, ರೊಹಿಂಗ್ಯಾ ನಿರಾಶ್ರಿತರೂ ಸೇರಿದಂತೆ ಸಾಮಾನ್ಯ ಮುಗ್ಧ ಜನರು ಈ ಹಿಂಸೆಯಿಂದ ಹೊರಬರಲು ನಾವೆಲ್ಲರೂ ಪ್ರಾರ್ಥಿಸಬೇಕಿದೆ ಎಂದು ಹೇಳಿದ್ದಾರೆ. ಇಲ್ಲಿನ ಸಂಘರ್ಷಗಳು ಕೊನೆಗೊಂಡು ಶಾಂತಿ ನೆಲೆಸಬೇಕೆಂದರೆ ಅದಕ್ಕೆ ಪ್ರಮುಖ ಪರಿಹಾರ ಸಂವಾದ ಹಾಗೂ ಮಾತುಕತೆಯಾಗಿದೆ. ಸಂವಾದ ಹಾಗೂ ಮಾತುಕತೆಯ ಮುಖಾಂತರವೇ ನಾವು ಸಂಘರ್ಷವನ್ನು ಕೊನೆಗಾಣಿಸಬಹುದು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವಿಶ್ವ ಯುವ ದಿನ ಶಿಲುಬೆ ಹಸ್ತಾಂತರ     

2027ರಲ್ಲಿ ಉತ್ತರ ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿ ವಿಶ್ವ ಯುವ ದಿನವನ್ನು ಆಚರಿಸುವ ಹಿನ್ನೆಲೆ ಪೋರ್ಚುಗಲ್ಲಿನ ಯುವಕರು ಶಿಲುಬೆಯನ್ನು ದಕ್ಷಿಣ ಕೊರಿಯಾದ ಯುವ ಸಮೂಹಕ್ಕೆ ಹಸ್ತಾಂತರಿಸಿದ್ದಾರೆ. ಎದೆ ಬೆಳೆ ವಿಶ್ವಗುರು ಪ್ರಾಂತ್ಯದವರು ಭರವಸೆಯನ್ನು ಕಳೆದುಕೊಳ್ಳದೆ ಕ್ರೈಸ್ತರು ಶುಭ ಸಂದೇಶ ಮೌಲ್ಯಗಳು ಅಳವಡಿಸಿಕೊಂಡು ಜೀವಿಸಬೇಕು ಎಂದು ಹೇಳಿದ್ದಾರೆ. ದೈವಾರಧನಾ ವಿಧಿ ವರ್ಷವು ಮುಕ್ತಾಯಗೊಂಡ ಹಿನ್ನೆಲೆ, ವಿಶ್ವಗುರು ಫ್ರಾನ್ಸಿಸ್ ಅವರು ಕ್ರಿಸ್ತರ ಶಾಶ್ವತ ರಾಜ್ಯ ಬರಲಿದೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಬೇಕು ಎಂದು ಹೇಳಿದರು.

ಅಖಿಲ ವಿಶ್ವದ ಅರಸ ಪ್ರಭು ಯೇಸುಕ್ರಿಸ್ತರ ಮಹೋತ್ಸವ

ಇಂದು ಅಖಿಲ ವಿಶ್ವದ ಅರಸ ಕ್ರಿಸ್ತ ರಾಜರ ಮಹೋತ್ಸವದ ಹಿನ್ನೆಲೆ ವಿಶ್ವಗುರು ಫ್ರಾನ್ಸಿಸ್ ಅವರು ಯೇಸುವಿನ ಅರಸತ್ವದ ಕುರಿತು ಮಾತನಾಡಿದರು. ಪ್ರಭು ಯೇಸುಕ್ರಿಸ್ತರ ಅರಸತ್ವ ಎಂಬುದು ಸ್ವರ್ಗದ್ದಾಗಿದ್ದು, ಅವರು ಇಡೀ ವಿಶ್ವ, ಭೂಮಂಡಲದ ಅರಸರಾಗಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಇಡೀ ವಿಶ್ವದ ಅರಸರಾಗಿದ್ದರೂ, ನಮಗಾಗಿ ಸೇವಕನಾಗಿ, ಪ್ರಾಣತ್ಯಾಗವನ್ನು ಮಾಡಿದ ನಿಜವಾದ ಅರಸ ಪ್ರಭು ಯೇಸುಕ್ರಿಸ್ತರಿಗೆ ನಾವು ಕಿವಿಗೊಡಬೇಕಿದೆ ಎಂದು ಹೇಳಿದರು.

24 November 2024, 14:37