ಜ್ವಾಲಾಮುಖಿ ಸ್ಪೋಟದ ಬಲಿಪಶುಗಳಿಗೆ ವಿಶ್ವಗುರು ಫ್ರಾನ್ಸಿಸ್ ಪ್ರಾರ್ಥನೆ
ವರದಿ: ವ್ಯಾಟಿಕನ್ ನ್ಯೂಸ್
ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಇಂಡೋನೇಷಿಯಾದಲ್ಲಿ ಜ್ವಾಲಾಮುಖಿ ಸ್ಪೋಟದಿಂದ ಮೃತರಾದ ಎಲ್ಲಾ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿದ್ದಾರೆ ಹಾಗೂ ಸ್ಪೇನಿನ ವೆಲೆನ್ಸಿಯ ನಗರದಲ್ಲಿ ಉಂಟಾಗಿರುವ ಪ್ರವಾಹಗಳ ಕುರಿತು ಸಹ ಮಾತನಾಡಿದ್ದಾರೆ. ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಗಳು ಕುರಿತು ಪ್ರಸ್ತಾಪವನ್ನು ಮಾಡಿರುವ ಅವರು ವಿಶ್ವಶಾಂತಿಗಾಗಿ ಪ್ರಾರ್ಥಿಸುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.
ಇಂಡೋನೇಷಿಯಾದ ಜ್ವಾಲಾಮುಖಿ ಸ್ಪೋಟದಿಂದ ಮೃದರಾಗಿರುವ ವ್ಯಕ್ತಿಗಳನ್ನು ನೆನಪಿಸಿಕೊಂಡ ಅವರು ಇದರಲ್ಲಿ ಮಾಡಿದ ಎಲ್ಲರ ಆತ್ಮ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ನಿರಾಶ್ರಿತರಾದ ಕುಟುಂಬಗಳು ಕುರಿತು ಕಾಳಜಿಯನ್ನು ವ್ಯಕ್ತಪಡಿಸುವ ವಿಷಕರು ಫ್ರಾನ್ಸಿಸ್ ಅವರು ದೇವರು ಅವರನ್ನು ಸಂತೈಸಲು ಎಂದು ಪ್ರಾರ್ಥಿಸುತ್ತಾ, ಧರ್ಮಸಭೆಯ ನೆರವಿನ ಭರವಸೆಯನ್ನು ನೀಡಿದರು.
ಇದೆ ವೇಳೆ ಸ್ಪೇನಿನ ವೆಲೆನ್ಸಿಯಾ ನಗರದಲ್ಲಿ ಉಂಟಾಗುತ್ತಿರುವ ಪ್ರವಾಹಗಳ ಕುರಿತು ವಿಶ್ವಗುರು ಫ್ರಾನ್ಸಿಸ್ ಮಾತನಾಡಿದರು. ನೆರೆದಿದ್ದ ಭಕ್ತಾದಿಗಳಿಗೆ ಈ ಪ್ರವಾಹದಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ಜನರಿಗಾಗಿ ಪ್ರಾರ್ಥಿಸುವಂತೆ ಹಾಗೂ ಅವರಿಗೆ ನೆರವಿನ ಹಸ್ತವನ್ನು ಚಾಚುವಂತೆ ವಿಶ್ವಗುರು ಫ್ರಾನ್ಸಿಸ್ ಅವರು ಮನವಿ ಮಾಡಿಕೊಂಡರು.
ಇತ್ತೀಚಿಗಷ್ಟೇ ಮೊಜಾಂಬಿಕ್ ದೇಶದಲ್ಲಿ ತಲೆದೂರಿರುವ ನಾಗರಿಕ ಸಂಘರ್ಷಗಳ ಕುರಿತು ಮಾತನಾಡಿದ ಅವರು ಈ ದೇಶದಲ್ಲಿ ಶೀಘ್ರವೇ ಶಾಂತಿ ಮರು ಸ್ಥಾಪನೆಯಾಗುವಂತೆ ಪ್ರಾರ್ಥಿಸಲು ಭಕ್ತಾದಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ವಿವಿಧ ದೇಶಗಳ ಯುದ್ಧಗಳನ್ನು ನೆನಪಿಸಿಕೊಂಡ ವಿಶ್ವಗುರು ಫ್ರಾನ್ಸಿಸ್ ಅವರು, ವಿಶ್ವಶಾಂತಿಗಾಗಿ ಪ್ರಾಥಿಸುವಂತೆ ಸಕಲ ಕ್ರೈಸ್ತ ಭಕ್ತಾದಿಗಳಿಗೆ ಕರೆ ನೀಡಿದರು.