Vatican Angelus Prayer

ಯುವ ಸಮೂಹಕ್ಕೆ ಪೋಪ್: ಭರವಸೆಯ ಸಾಕ್ಷಿಗಳಾಗಲು ಧೈರ್ಯದಿಂದಿರಿ

ಭಾನುವಾರ 39ನೇ ವಿಶ್ವ ಯುವ ದಿನದಂದು ಪೋಪ್ ಫ್ರಾನ್ಸಿಸ್ ಅವರು ಪೋರ್ಚುಗಲ್ ಮತ್ತು ದಕ್ಷಿಣ ಕೊರಿಯ ದೇಶಗಳಿಂದ ಬಂದಿದ್ದ ಯುವ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ. 2027 ರಲ್ಲಿ ವಿಶ್ವವಯುವ ದಿನವನ್ನು ಸಿಯೋಲ್ ನಗರದಲ್ಲಿ ಆಚರಿಸಲಾಗುತ್ತಿರುವ ಹಿನ್ನೆಲೆ, ಕ್ರಿಸ್ತ ರಾಜರ ಮಹೋತ್ಸವವಾದ ಇಂದು ವಿಶ್ವ ಯುವ ದಿನ ಶಿಲುಬೆಯನ್ನು ಪೋರ್ಚುಗೀಸ್ ಯುವಕರು ಸಿಯೋಲ್ ಯುವಕರಿಗೆ ಹಸ್ತಾಂತರಿಸಿದ್ದಾರೆ. ಇದರ ಜೊತೆಗೆ ಮಾತೆ ಮರಿಯಮ್ಮನವರ ಪ್ರತಿಮೆಯನ್ನೂ ಸಹ ಹಸ್ತಾಂತರಿಸಲಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

2027ರಲ್ಲಿ ಉತ್ತರ ದಕ್ಷಿಣ ಕೊರಿಯಾದ ಸಿಯೋಲ್ ನಗರದಲ್ಲಿ ವಿಶ್ವ ಯುವ ದಿನವನ್ನು ಆಚರಿಸುವ ಹಿನ್ನೆಲೆ ಪೋರ್ಚುಗಲ್ಲಿನ ಯುವಕರು ಶಿಲುಬೆಯನ್ನು ದಕ್ಷಿಣ ಕೊರಿಯಾದ ಯುವ ಸಮೂಹಕ್ಕೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ, ವಿಶ್ವಗುರು ಫ್ರಾನ್ಸಿಸ್ ಅವರು, ಭರವಸೆಯನ್ನು ಕಳೆದುಕೊಳ್ಳದೆ, ಕ್ರೈಸ್ತರು ಶುಭ ಸಂದೇಶ ಮೌಲ್ಯಗಳು ಅಳವಡಿಸಿಕೊಂಡು ಜೀವಿಸಬೇಕು ಎಂದು ಹೇಳಿದ್ದಾರೆ. ದೈವಾರಧನಾ ವಿಧಿ ವರ್ಷವು ಮುಕ್ತಾಯಗೊಂಡ ಹಿನ್ನೆಲೆ, ವಿಶ್ವಗುರು ಫ್ರಾನ್ಸಿಸ್ ಅವರು ಕ್ರಿಸ್ತರ ಶಾಶ್ವತ ರಾಜ್ಯ ಬರಲಿದೆ ಎಂಬ ನಂಬಿಕೆಯನ್ನು ನಾವೆಲ್ಲರೂ ಹೊಂದಬೇಕು ಎಂದು ಹೇಳಿದರು.

ಪೋಪ್ ಫ್ರಾನ್ಸಿಸ್ ಅವರ ತ್ರಿಕಾಲ ಪ್ರಾರ್ಥನೆಯ ವೇಳೆ ಅವರ ಎರಡೂ ಬದಿಯಲ್ಲಿ ದಕ್ಷಿಣ ಕೊರಿಯಾದ ಯುವಕರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಈ ಮೂಲಕ ಪೋಪ್ ಫ್ರಾನ್ಸಿಸ್ ಅವರು ತಾವೊಬ್ಬ ಪ್ರಗತಿಪರ ಪೋಪ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.  

24 November 2024, 14:25