ವಿಶ್ವಗುರುಗಳ ನವೆಂಬರ್ ತಿಂಗಳ ಪ್ರಾರ್ಥನಾ ಕೋರಿಕೆ: ಮಕ್ಕಳನ್ನು ಕಳೆದುಕೊಂಡಿರುವವರಿಗಾಗಿ ಪ್ರಾರ್ಥನೆ

ವಿಶ್ವಗುರು ಫ್ರಾನ್ಸಿಸ್ ಅವರು ನವೆಂಬರ್ ತಿಂಗಳ ತಮ್ಮ ಮಾಸಿಕ ಪ್ರಾರ್ಥನಾ ಉದ್ದೇಶಕ್ಕಾಗಿ ಕುಟುಂಬಗಳಲ್ಲಿ ಮಗ ಅಥವಾ ಮಗಳನ್ನು ಕಳೆದುಕೊಂಡಿರುವ ಪೋಷಕರಿಕಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು ಫ್ರಾನ್ಸಿಸ್ ಅವರು ನವೆಂಬರ್ ತಿಂಗಳ ತಮ್ಮ ಮಾಸಿಕ ಪ್ರಾರ್ಥನಾ ಉದ್ದೇಶಕ್ಕಾಗಿ ಕುಟುಂಬಗಳಲ್ಲಿ ಮಗ ಅಥವಾ ಮಗಳನ್ನು ಕಳೆದುಕೊಂಡಿರುವ ಪೋಷಕರಿಕಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದ್ದಾರೆ.  

ಈ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರಿಗಾಗಿ ನಾವು ಈ ತಿಂಗಳು ವಿಶೇಷವಾಗಿ ಪ್ರಾರ್ಥಿಸೋಣ. ಅವರು ತಮ್ಮ ಸಮುದಾಯಗಳಲ್ಲಿ ಸಾಂತ್ವನವನ್ನು ಕಂಡುಕೊಳ್ಳುವಂತಾಗಲಿ. ಸಾಂತ್ವನ ಹಾಗೂ ಸಮಾಧಾನದ ಆತ್ಮರು ಅವರಿಗೆ ಸಾಂತ್ವನವನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. 

ಮುಂದುವರೆದು ತಮ್ಮ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಗಂಡ ಅಥವಾ ಹೆಂಡತಿಯನ್ನು ಕಳೆದುಕೊಂಡಿರುವವರಿಗೆ ಸಮಾಧಾನವನ್ನು ಹೇಳಲು ನಮಗೆ ಪದಗಳು ಸಿಗಬಹುದು; ಆದರೆ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರಿಗೆ ಸಾಂತ್ವನ ಹಾಗೂ ಸಮಾಧಾನವನ್ನು ಹೇಳಲು ನಮಗೆ ಯಾವ ಪದಗಳೂ ಸಿಗುವುದಿಲ್ಲ" ಎಂದು ಹೇಳಿದ್ದಾರೆ.

ಇವರಿಗಾಗಿ ನಾವು ಸಾಂತ್ವನವನ್ನು ಹೇಳಬೇಕಾದರೆ ಅವರಿಗೆ ನಾವು ಕಿವಿಗೊಡಬೇಕು ಹಾಗೂ ಅವರಿಗಾಗಿ ಪ್ರಾರ್ಥಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.   

01 November 2024, 07:57