ವಿಶ್ವಗುರುಗಳ ಮನೆಯ ಪ್ರಬೋಧಕರಾಗಿ ನೇಮಕವಾದ ಫಾದರ್ ಪಸೋಲಿನಿ

ಪ್ರಖ್ಯಾತ ಬೈಬಲ್ ತಜ್ಞರಾದ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರನ್ನು ವಿಶ್ವಗುರು ಫ್ರಾನ್ಸಿಸರು ವಿಶ್ವಗುರುಗಳ ಮನೆಯ ಪ್ರಬೋಧಕರನ್ನಾಗಿ ನೇಮಿಸಿದ್ದಾರೆ. ಬೈಬಲ್ ಶ್ರೀಗ್ರಂಥದ ಅರಿಯನ್ನು ಪಾಲನಾ ಸೇವೆ ಮಿಳಿತಗೊಳಿಸುವ ಮೂಲಕ ಇವರು ಜನರ ಸೇವೆಯನ್ನು ಮಾಡುತ್ತಾರೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಡೆವಿನ್ ವಾಟ್ಕಿನ್ಸ್

ಪ್ರಖ್ಯಾತ ಬೈಬಲ್ ತಜ್ಞರಾದ ಕಪುಚಿನ್ ಸಭೆಯ ಫಾದರ್ ರೊಬೆರ್ತೊ ಪಸೋಲಿನಿ ಅವರನ್ನು ವಿಶ್ವಗುರು ಫ್ರಾನ್ಸಿಸರು ವಿಶ್ವಗುರುಗಳ ಮನೆಯ ಪ್ರಬೋಧಕರನ್ನಾಗಿ ನೇಮಿಸಿದ್ದಾರೆ. ಬೈಬಲ್ ಶ್ರೀಗ್ರಂಥದ ಅರಿಯನ್ನು ಪಾಲನಾ ಸೇವೆ ಮಿಳಿತಗೊಳಿಸುವ ಮೂಲಕ ಇವರು ಜನರ ಸೇವೆಯನ್ನು ಮಾಡುತ್ತಾರೆ. 

ವಿಶ್ವಗುರು ಫ್ರಾನ್ಸಿಸ್ ಅವರು ಶನಿವಾರ ಈ ನೇಮಕಾತಿಯನ್ನು ಪ್ರಕಟಿಸಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠವು ವರದಿ ಮಾಡಿದೆ.

ಉತ್ತರ ಇಟಲಿಯ ದೈವಶಾಸ್ತ್ರ ಸಂಸ್ಥೆಯಲ್ಲಿ ಫಾದರ್ ರೊಬೆರ್ತೊ ಪಸೋಲಿನಿ ಅವರು ದೈವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಮುಂದೆ ಇವರು ಪೋಪ್ ಫ್ರಾನ್ಸಿಸ್ ಅವರಿಗೆ ಹಾಗೂ ಕಾರ್ಡಿನಲ್'ಗಳಿಗೆ ಆಗಮನಕಾಲ ಹಾಗೂ ತಪಸ್ಸುಕಾಲದ ಪ್ರಬೋಧನೆಯನ್ನು ಭೋದಿಸಲಿದ್ದಾರೆ.

ಈವರೆಗೂ ವಿಶ್ವಗುರುಗಳ ಮನೆಯ ಪ್ರಭೋಧಕರಾಗಿದ್ದ ಇದೇ ಕಪುಚಿನ್ ಸಭೆಯ ಕಾರ್ಡಿನಲ್ ರನೇರೋ ಕಾಂಟಲಮೆಸ್ಸಾ ಅವರಿಂದ ಅವರು ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾರ್ಡಿನಲ್ ರನೇರೋ ಕಾಂಟಲಮೆಸ್ಸಾ ಅವರು 1980 ರಿಂದ ಈವರೆಗೂ ಸುಮಾರು 44 ವರ್ಷಗಳ ಕಾಲ ಮೂರು ವಿಶ್ವಗುರುಗಳ ಅವಧಿಯಲ್ಲಿ ವಿಶ್ವಗುರುಗಳ ಪ್ರಬೋಧಕರಾಗಿ ಕಾರ್ಯನಿರ್ವಹಿದ್ದಾರೆ. ತೊಂಬತ್ತು ವರ್ಷದ ಅವರು ಈಗ ನಿವೃತ್ತಿಯಾಗುತ್ತಿದ್ದು, ಇಟಲಿಯ ಸನ್ಯಾಸಿ ಮಠದಲ್ಲಿ ಪ್ರಾರ್ಥನೆಯ ಬದುಕನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ. 

09 November 2024, 14:10