ಸೆರ್ಬಿಯಾದಲ್ಲಿ ರೈಲ್ವೇ ನಿಲ್ದಾಣದ ಚಾವಣಿ ಕುಸಿತದ ಸಂತ್ರಸ್ಥರಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೊಫರ್ ವೆಲ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಸೆರ್ಬಿಯಾ ದೇಶದಲ್ಲಿ ರೈಲ್ವೇ ನಿಲ್ದಾಣದ ಚಾವಣಿ ಕುಸಿತದ ಪರಿಣಾಮ ಮೃತರಾಗಿರುವವರಿಗೆ ಶಾಂತಿಯನ್ನು ವ್ಯಕ್ತಪಡಿಸಿದ್ದು, ಇದರಲ್ಲಿ ಗಾಯಗೊಂಡಿರುವವರಿಗಾಗಿ ಪ್ರಾರ್ಥಿಸಿದ್ದಾರೆ. ಸೆರ್ಬಿಯಾದ ಅಧ್ಯಕ್ಷರಿಗೆ ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದು, ಮೃತರ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಸೆರ್ಬಿಯಾದ ಅಧ್ಯಕ್ಷರಾಗಿರುವ ಅಲೆಕ್ಸಾಂಡರ್ ವಿಕೂಚಿ ಅವರಿಗೆ ಟೆಲಿಗ್ರಾಂ ಸಂದೇಶ ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು "ಈ ಘಟನೆಯಿಂದಾಗಿ ನೋವನ್ನು ಅನುಭವಿಸಿರುವ ಕುಟುಂಬಗಳಿಗೆ, ನಿಮಗೆ ಹಾಗೂ ನಿಮ್ಮ ದೇಶದ ಪ್ರಜೆಗಳಿಗೆ ನಾನು ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಈ ನೋವಿನಿಂದ ಶೀಘ್ರವಾಗಿ ಹೊರಬರುವ ಶಕ್ತಿಯನ್ನು ದೇವರು ನಿಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಈ ಘಟನೆಯಲ್ಲಿ ಸುಮಾರು 14 ಜನರು ಮೃತ ಹೊಂದಿದ್ದು, ಮೂವತ್ತಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾಗಿವೆ. ಸಾವಿರಾರು ಜನರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟಿಸಲು ಮೆರವಣಿಯಲ್ಲಿ ಸೇರಿದ್ದಾರೆ ಎಂದು ವರದಿಯಾಗಿದೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರಿ, ಅವರನ್ನು ದೇವರ ಕರುಣೆಗೆ ಒಪ್ಪಿಸಿದ್ದಾರೆ.