ಹುಡುಕಿ

ಉಕ್ರೇನಿಯನ್ ಮಕ್ಕಳು ಮತ್ತು ಬಂಧಿಗಳನ್ನು ವಾಪಾಸ್ಸು ಕರೆತರಲು ವ್ಯಾಟಿಕನ್ ಬದ್ಧವಾಗಿದೆ

ಕೆನಡಾದಲ್ಲಿ ನಡೆದಿರುವ ಶಾಂತಿ ಸಮಾವೇಷದಲ್ಲಿ ಭಾಗವಹಿಸಿ ಮಾತನಾಡಿರುವ ವ್ಯಾಟಿಕನ್ ವಿದೇಶಿ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ಉಕ್ರೇನಿಯನ್ ಮಕ್ಕಳು ಮತ್ತು ಬಂಧಿಗಳನ್ನು ವಾಪಾಸ್ಸು ಕರೆತರಲು ವ್ಯಾಟಿಕನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಕೆನಡಾದಲ್ಲಿ ನಡೆದಿರುವ ಶಾಂತಿ ಸಮಾವೇಷದಲ್ಲಿ ಭಾಗವಹಿಸಿ ಮಾತನಾಡಿರುವ ವ್ಯಾಟಿಕನ್ ವಿದೇಶಿ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು ಉಕ್ರೇನಿಯನ್ ಮಕ್ಕಳು ಮತ್ತು ಬಂಧಿಗಳನ್ನು ವಾಪಾಸ್ಸು ಕರೆತರಲು ವ್ಯಾಟಿಕನ್ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಈ ಕುರಿತು ವಿವರವಾಗಿ ಮಾತನಾಡಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಅವರು "ಈ ಕುರಿತು ನಾವು ಈಗಾಗಲೇ ತೀವ್ರ ಪ್ರಯತ್ನಗಳನ್ನು ನಡೆಸಿದ್ದೇವೆ. ಆದರೆ ಈ ಕುರಿತು ನಿರೀಕ್ಷಿತ ಫಲ ಸಿಕ್ಕಿಲ್ಲ" ಎಂದು ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಸುಮಾರು ಹತ್ತೊಂಬತ್ತು ಸಾವಿರ ಮಕ್ಕಳನ್ನು ರಷ್ಯಾ ಬಿಡುಗಡೆ ಮಾಡಬೇಕು. ಉದ್ದೇಶಪೂರ್ವಕವಾಗಿ ಅದು ಬಲವಂತದಿಂದ ವಶಕ್ಕೆ ತೆಗೆದುಕೊಂಡಿರುವ ಮಕ್ಕಳನ್ನು ಕೂಡಲೇ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ ವ್ಯಾಟಿಕನ್ ಮಧ್ಯ ಪ್ರವೇಶಿಸಿ, ರಷ್ಯಾದ ಮೇಲೆ ಒತ್ತಡವನ್ನು ಹೇರಬೇಕು ಎಂದು ಹೇಳಿದ್ದಾರೆ. ಕಳೆದ ತಿಂಗಳು ಕಾರ್ಡಿನಲ್ ಮಾರಿಯೋ ಝುಪ್ಪಿ ಅವರು ಪೋಪ್ ಫ್ರಾನ್ಸಿಸರ ವಿಶೇಷ ಪ್ರತಿನಿಧಿಯಾಗಿ ರಷ್ಯಾ ದೇಶಕ್ಕೆ ಶಾಂತಿ ಮಾತುಕತೆಗಳಿಗಾಗಿ ತೆರಳಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.   

02 November 2024, 17:01