ವ್ಯಾಟಿಕನ್ನಿನ ಪತ್ರಗಾರ ಹಾಗೂ ಗ್ರಂಥಾಲಯವನ್ನು ನವೀಕರಿಸಲು ಅನುಮತಿ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ವಿಶ್ವಗುರು ಫ್ರಾನ್ಸಿಸ್ ಅವರು ವ್ಯಾಟಿಕಣ್ಣಿನ ಪತ್ರಗಾರ ಹಾಗೂ ಗ್ರಂಥಾಲಯವನ್ನು ನವೀಕರಿಸಲು ಆದೇಶವನ್ನು ನೀಡಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ವಿಶ್ವ ಸಂಸ್ಕೃತಿಕ ಸಮುದಾಯಕ್ಕೆ ದೊರಕುವಂತೆ ಮಾಡುವ ಧರ್ಮಸಭೆಯ ಬದ್ಧತೆಯನ್ನು ಒತ್ತಿ ಹೇಳಿದ್ದಾರ
ವ್ಯಾಟಿಕನ್ ನಗರದ ಪತ್ರಗಾರ ಹಾಗೂ ಗ್ರಂಥಾಲಯವನ್ನು ಮತ್ತಷ್ಟು ಹೆಚ್ಚಿನ ಪುಸ್ತಕಗಳು ಹಾಗೂ ದಾಖಲೆಗಳು ಇರಿಸಲು ಅನುಕೂಲವಾಗುವಂತೆ ನವೀಕರಿಸಿ ವಿಸ್ತರಿಸಲು ಪೋಪ್ ಫ್ರಾನ್ಸಿಸ್ ಅವರು ಅಧಿಕೃತ ಆದೇಶವನ್ನು ನೀಡಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ. ಅಕ್ಟೋಬರ್ 29 2024 ರಂದು ವಿಶ್ವಗುರು ಫ್ರಾನ್ಸಿಸ್ ಅವರು ಈ ಆದೇಶಕ್ಕೆ ಸಹಿಯನ್ನು ಮಾಡಿದ್ದು, ಗ್ರಂಥಾಲಯ ಹಾಗೂ ಪತ್ರಗಾರವನ್ನು ವಿಸ್ತರಿಸುವುದು ಮತ್ತಷ್ಟು ಐತಿಹಾಸಿಕ ದಾಖಲೆಗಳನ್ನು ಸ್ವೀಕರಿಸಲು ಹಾಗೂ ಆ ಮೂಲಕ ಹೆಚ್ಚಿನ ಜ್ಞಾನವನ್ನು ಜನರಿಗೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
2000 ವರ್ಷಗಳಿಂದ ಧರ್ಮಸಭೆಯ ದಾಖಲೆಗಳು ಸೇರಿದಂತೆ ವಿಶ್ವದ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ದಾಖಲೆಗಳನ್ನು ಈ ಗ್ರಂಥಾಲಯ ಹಾಗೂ ಪತ್ರಗಾರರು ಹೊಂದಿದೆ. ಇದನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಮತ್ತಷ್ಟು ಸಮರ್ಪಕವಾಗಿ ಇದನ್ನು ನಿರ್ವಹಿಸುವ ನಿಟ್ಟಿನಲ್ಲಿ ನವೀಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂದುವರೆದು ಈ ಆದೇಶದಲ್ಲಿ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಈ ಕಾರ್ಯವನ್ನು ಸಾಧಿಸಲು ವ್ಯಾಟಿಕನಿನ್ನ ಇನ್ನಿತರ ಸಂಸ್ಥೆಗಳು ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕು ಹಾಗೂ ಆ ಮೂಲಕ ಗ್ರಂಥಾಲಯ ಮತ್ತು ಪತ್ರಗಾರದ ವಿಸ್ತರಣೆ ಹಾಗೂ ನವೀಕರಣ ಕ್ರಿಯೆಯನ್ನು ಸುಗಮವಾಗಿಸಬೇಕು ಎಂದು ಹೇಳಿದ್ದಾರೆ.