ಸ್ವಯಂಸೇವಕರು ಹಾಗೂ ನಿರಾಶ್ರಿತರಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತು: ನಾವು ಕೊಡುವವರೂ, ಕೊಳ್ಳುವವರೂ ಆಗಿದ್ದೇವೆ

ವಿಯೆನ್ನ ದೇಶದಲ್ಲಿ ಬೀದಿಗಳಲ್ಲಿ ವಾಸಿಸುತ್ತಿರುವ ಜನರ ಕುರಿತು ಆರೈಕೆಯನ್ನು ಮಾಡುತ್ತಿರುವ ಗುಂಪನ್ನು ರೋಮ್ ನಗರದಲ್ಲಿ ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಸಹ ಕೊಡುವವರು ಹಾಗೂ ಕೊಳ್ಳುವವರಾಗಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಸಹೋದರ ಸಹೋದರಿಯರನ್ನು ನಗು ಮುಖದ ಹಾಗೂ ಸ್ನೇಹಪೂರ್ವಕವಾಗಿ ಮಾತನಾಡಿಸುವುದರ ಮೂಲಕ ಸಹೋದರತೆಯನ್ನು ಸಾರಬೇಕು ಎಂದು ಅವರು ಹೇಳಿದ್ದಾರೆ.

ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್

ಬೀದಿಗಳಲ್ಲಿ ವಾಸಿಸುತ್ತಿರುವ ವಿವಿಧ ದೇಶಗಳ ಹಾಗೂ ವಿವಿಧ ಭಾಷೆ ಹಾಗೂ ವಿವಿಧ ಧರ್ಮಗಳ ಜನರನ್ನು ಆರೈಕೆ ಮಾಡುತ್ತಿರುವ ಈ ಗುಂಪನ್ನು ಹಾಗೂ ಅದರ ಕಾರ್ಯವನ್ನು ವಿಶ್ವಗುರು ಫ್ರಾನ್ಸಿಸ್ ಅವರು ಶ್ಲಾಘಿಸಿದರು. ನಾವೆಲ್ಲರೂ ವಿವಿಧ ಭಾಷೆ ವಿವಿಧ ರಾಷ್ಟ್ರೀಯತೆ ಹಾಗೂ ವಿವಿಧ ಧರ್ಮಗಳಿಗೆ ಸೇರಿದರು ಸಹ ನಮ್ಮನ್ನು ಒಂದುಗೂಡಿಸುವುದು ನಾವೆಲ್ಲರೂ ಸಹೋದರ ಸಹೋದರಿಯರು ಹಾಗೂ ನಾವೆಲ್ಲರೂ ದೇವರ ಮಕ್ಕಳು ಎಂಬ ಭಾವ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ನಮ್ಮ ಸಮಾಜದಲ್ಲಿ ಒಂದು ವರ್ಗದ ಜನರು ಮಾತ್ರ ಕೊಡುತ್ತಾರೆ ಮತ್ತೊಂದು ವರ್ಗದ ಜನರು ಮಾತ್ರ ಪಡೆದುಕೊಳ್ಳುತ್ತಾರೆ ಎಂಬ ಭಾವನೆ ತಪ್ಪು. ನಾವೆಲ್ಲರೂ ಸಹ ಒಂದಲ್ಲ ಒಂದು ರೀತಿಯಲ್ಲಿ ನೀಡುವವರಾಗಿದ್ದೇವೆ ಹಾಗೂ ಅದೇ ಸಂದರ್ಭದಲ್ಲಿ ಪಡೆದುಕೊಳ್ಳುವವರಾಗಿದ್ದೇವೆ ಎಂದು ಹೇಳಿದರು. ಈ ಸತ್ಯವನ್ನು ನಾವು ಅರಿತುಕೊಂಡು ಸಹೋದರರಾಗಿ ಬಾಳ ಬೇಕೆಂದು ವಿಶ್ವಗುರು ಫ್ರಾನ್ಸಿಸ್ ಅವರು ಕಿವಿ ಮಾತನ್ನು ಹೇಳಿದರು.

ಅಂತಿಮವಾಗಿ ಪ್ರೀತಿಯ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು, ಈ ರೀತಿಯ ಒಗ್ಗಟ್ಟನ್ನು ನಾವು ಹೊಂದಬೇಕಾದರೆ, ಯಾವುದೇ ರೀತಿಯ ಕಟ್ಟುಪಾಡುಗಳಿಲ್ಲದೆ ಪ್ರೀತಿಸುವುದನ್ನು ಕಲಿಯಬೇಕು ಎಂದು ಹೇಳಿದರು.

08 November 2024, 15:34