ಬಡವರ ವಿಶ್ವ ದಿನ: 1300 ಬಡವರಿಗೆ ಭೋಜನವನ್ನು ಏರ್ಪಡಿಸಿದ ವಿಶ್ವಗುರು ಫ್ರಾನ್ಸಿಸ್
ವರದಿ: ಫ್ರಾನ್ಸಿಸ್ಕಾ ಮೆರ್ಲೊ, ಅಜಯ್ ಕುಮಾರ್
ಈಗಾಗಲೇ ಉಂಟಾಗಿರುವ ಸಂಪ್ರದಾಯದಂತೆ ವಿಶ್ವಗುರು ಫ್ರಾನ್ಸಿಸ್ ಅವರು ಬಡವರ ವಿಶ್ವ ದಿನದಂದು ಬಲಿಪೂಜೆಯನ್ನು ಅರ್ಪಿಸಿದ ನಂತರ ರೋಮ್ ನಗರದ ಬಡವರೊಂದಿಗೆ ಭೋಜನವನ್ನು ಸವಿಯಲಿದ್ದಾರೆ.
ವಿಶ್ವಧರ್ಮ ಸಭೆಯೊಂದಿಗೆ ಬಡವರ ವಿಶ್ವ ದಿನವನ್ನು ಆಚರಿಸುವ ಹಿನ್ನೆಲೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಸಂಪ್ರದಾಯದಂತೆ ಬಡವರ ಜೊತೆ ಮಧ್ಯಾಹ್ನದ ಭೋಜನವನ್ನು ಸವಿಯಲ್ಲಿದ್ದಾರೆ. ಬಡವರ ವಿಶ್ವ ದಿನದ ಅಂಗವಾಗಿ ಬಲಿಪೂಜೆಯನ್ನು ಅರ್ಪಿಸಿದ ನಂತರ, ಅವರು 1300 ಬಡವರ ಜೊತೆಗೆ ಮಧ್ಯಾಹ್ನದ ಭೋಜನವನ್ನು ಮಾಡಲಿದ್ದಾರೆ.
ಈ ವರ್ಷ ಆಚರಿಸಲಿರುವುದು ಎಂಟನೇ ಬಡವರ ವಿಶ್ವ ದಿನವಾಗಿದೆ. ಬಡವರ ವಿಶ್ವ ದಿನವನ್ನು ಮೊಟ್ಟಮೊದಲ ಬಾರಿಗೆ 2017ರಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಆರಂಭಿಸಿದರು.
ಈ ವರ್ಷ ಬಡವರ ವಿಶ್ವದಿನವು ಸಾಧಾರಣ ಕಾಲದ 17ನೇ ಭಾನುವಾರದಂದು ಆಚರಿಸಲಾಗುತ್ತಿದ್ದು, ವಿಶ್ವಗುರು ಫ್ರಾನ್ಸಿಸ್ ಅವರು ಬಲಿಪೂಜೆಯನ್ನು ಅರ್ಪಿಸುವ ಮೂಲಕ ಇದು ಅಧಿಕೃತವಾಗಿ ಆರಂಭವಾಗುತ್ತದೆ.