ಹುಡುಕಿ

ಬಲಿಪೂಜೆಯಲ್ಲಿ ಪೋಪ್ ಫ್ರಾನ್ಸಿಸ್: ಯಾವುದೇ ಸಂದರ್ಭದಲ್ಲಿಯೂ ಕ್ರಿಸ್ತರು ನಮ್ಮ ಸಂತೋಷವಾಗಿದ್ದಾರೆ

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ, ಅವರು ಪಾಪ್ಯುಲರ್ ರಿಲಿಜಿಯೊಸಿಟಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ಇಲ್ಲಿನ ಸ್ಥಳೀಯ ಜನತೆಗೆ "ಗೌದೆತೆ ಭಾನುವಾರ" ಸಂತೋಷದ ಭಾನುವಾರದಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಕ್ರಿಸ್ತರು ಯಾವುದೇ ಸಂದರ್ಭದಲ್ಲಿ ನಮ್ಮ ಬದುಕಿನ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪಕ್ಕೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ, ಅವರು ಪಾಪ್ಯುಲರ್ ರಿಲಿಜಿಯೊಸಿಟಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ನಂತರ ಇಲ್ಲಿನ ಸ್ಥಳೀಯ ಜನತೆಗೆ "ಗೌದೆತೆ ಭಾನುವಾರ" ಸಂತೋಷದ ಭಾನುವಾರದಂದು ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಕ್ರಿಸ್ತರು ಯಾವುದೇ ಸಂದರ್ಭದಲ್ಲಿ ನಮ್ಮ ಬದುಕಿನ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಸ್ನಾನಿಕ ಯೊವ್ವಾನರ ಸಂದೇಶವನ್ನು ಪುನರುಚ್ಛರಿಸಿದ ಪವಿತ್ರ ತಂದೆ ಫ್ರಾನ್ಸಿಸರು ನೀವೆಲ್ಲರೂ ಆಧ್ಯಾತ್ಮಿಕವಾಗಿ ನವೀಕರಣಗೊಳ್ಳಬೇಕು ಹಾಗೂ ಪರಿವರ್ತನೆಯನ್ನು ಹೊಂದ ಬೇಕು ಎಂದು ಹೇಳಿದರು.

ಮುಂದುವರೆದರು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಇಂದು ನಾವು ಸಂತೋಷದ ಭಾನುವಾರವನ್ನು ಆಚರಿಸುತ್ತಿದ್ದೇವೆ. ಮೆಸ್ಸಾಯನ ಆಗಮನಕ್ಕಾಗಿ ನಾವು ಎದುರುನೋಡುವ ಹಿನ್ನೆಲೆಯಲ್ಲಿ ಸಂತೋಷವಾಗಿರಬೇಕು. ಏಕೆಂದರೆ, ಕ್ರಿಸ್ತರು ಸಂತೋಷವಾಗಿರುತ್ತಾರೆ. ಎಂಥದ್ದೇ ಸಂದರ್ಭದಲ್ಲಿ ನಾವು ಕ್ರಿಸ್ತರನ್ನು ಸಂತೋಷದಿಂದ ಎದುರು ನೋಡಬೇಕು" ಎಂದು ನುಡಿದರು.

ಇಲ್ಲಿನ ಪ್ರಖ್ಯಾತ ಭಕ್ತಿ ಆಚರಣೆಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಪ್ರಖ್ಯಾತ ಆಚರಣೆಗಳು ಹೇಗೆ ಇಲ್ಲಿನ ಜನರ ವಿಶ್ವಾಸದ ಭಾಗವಾಗಿವೆ ಹಾಗೂ ಅವುಗಳನ್ನು ಹೇಗೆ ಸುವಾರ್ತಾ ಪ್ರಸಾರಕ ಅಂಶಗಳನ್ನಾಗಿ ಪರಿಗಣಿಸಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು. ತ್ಯಂತ ವೇಗವಾಗಿ ಜಾತ್ಯಾತೀತವಾಗುತ್ತಿರುವ ಸಮಾಜ ಹಾಗೂ ಸಮುದಾಯಗಳಲ್ಲಿ ಪ್ರಖ್ಯಾತ ಭಕ್ತಿ ಆಚರಣೆಗಳು ಎಂತಹ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದರ ಮೇಲೆ ಬೆಳಕನ್ನು ಚೆಲ್ಲಿರುವ ಪೋಪ್ ಫ್ರಾನ್ಸಿಸ್ ಆರೋಗ್ಯಕರ ಜಾತ್ಯಾತೀತತೆಯನ್ನು ಉತ್ತೇಜಿಸಬೇಕು ಹಾಗೂ ಎಲ್ಲರ ಸಾಮಾನ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಕರಾವಳಿಯಲ್ಲಿನರುವ ಕಾಸಿಕಾ ದೇಶಕ್ಕೆ ಇಂದು ಭೇಟಿ ನೀಡಿದ್ದು ಇಲ್ಲಿನ ಸ್ಥಳೀಯ ಅಜಾಕ್ಸಿಯೋ ಮಹಾಧರ್ಮಕ್ಷೇತ್ರದ ಗುರುಗಳು ಹಾಗೂ ಧಾರ್ಮಿಕರನ್ನು ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಎಲ್ಲವನ್ನೂ ಕ್ಷಮಿಸಿ, ಯಾವಾಗಲೂ ಕ್ಷಮಿಸಿ ಎಂದು ಹೇಳಿದ್ದಾರೆ.  

ಕಾರ್ಸಿಕಾದ ಸ್ವರ್ಗಸ್ವೀಕೃತ ಮಾತೆ ಪ್ರಧಾನಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ನೆರೆದಿದ್ದ ಕಾರ್ಸಿಕಾದ ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರಿಗೆ ಪವಿತ್ರ ತಂದೆ ಫ್ರಾನ್ಸಿಸರು ಇಲ್ಲಿ ಅವರು ತ್ರಿಕಾಲ ಫ್ರಾರ್ಥನೆಯನ್ನು ಮಾಡಿದ ನಂತರ ಕಿವಿಮಾತನ್ನು ಹೇಳಿದ್ದಾರೆ.

16 December 2024, 16:13