ಹುಡುಕಿ

ಕಾಸಿಕಾ ದ್ವೀಪಕ್ಕೆ ಬಂದಿಳಿದ ಪೋಪ್: ಪ್ರಾಚೀನ ದೀಕ್ಷಾಸ್ನಾನ ಸ್ಥಳದಲ್ಲಿ ಪ್ರಾರ್ಥನೆ

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪಕ್ಕೆ ಬಂದಿಳಿದಿದ್ದು, ಪ್ರಾಚೀನ ದೀಕ್ಷಾಸ್ನಾನ ಸ್ಥಳದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಈ ಸ್ಥಳವು ಅಜಾಕ್ಸಿಯೋ ನಗರದ ಪ್ರಥಮ ಪ್ರಧಾನಾಲಯವಾಗಿತ್ತು.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪಕ್ಕೆ ಬಂದಿಳಿದಿದ್ದು, ಪ್ರಾಚೀನ ದೀಕ್ಷಾಸ್ನಾನ ಸ್ಥಳದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಈ ಸ್ಥಳವು ಅಜಾಕ್ಸಿಯೋ ನಗರದ ಪ್ರಥಮ ಪ್ರಧಾನಾಲಯವಾಗಿತ್ತು.

ಸುಮಾರು ಆರನೇ ಶತಮಾನಕ್ಕೆ ಸೇರಿದ ಸಂತ ಸ್ನಾನಿಕ ಯೊವ್ವಾನರ ಹೆಸರಿನಲ್ಲಿರುವ ಈ ದಿಕ್ಷಾಸ್ನಾನ ಸ್ಥಳವು ಅಜಾಕ್ಸಿಯೋ ಮಹಾಧರ್ಮಕ್ಷೇತ್ರದ ಪ್ರಪ್ರಥಮ ಪ್ರಧಾನಾಲಯವಾಗಿತ್ತು. ಪ್ರಸ್ತುತ ಇದು ಸೇಂಟ್-ಜಿಯಾನ್ ಜಿಲ್ಲೆಯಲ್ಲಿದ್ದು, ಇದೀಗ ಅತ್ಯಧಿಕ ನಗರೀಕರಣವಾದ ಜಿಲ್ಲೆಯಾಗಿದೆ.

ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ನೆಪೋಲಿಯನ್ ಬೊನಪಾರ್ತೆ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಇಲ್ಲಿನ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಗುರುಗಳೂ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರು ಸ್ವಾಗತಿಸಿದರು. ಇದೇ ವೇಳೆ ಫ್ರಾನ್ಸ್ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಮಹಾಧರ್ಮಾಧ್ಯಕ್ಷ ಸೆಲೆಸ್ತೀನೋ ಮಿಗ್ಲಿಯೋರೆ ಅವರೂ ಸಹ ಉಪಸ್ಥಿತರಿದ್ದರು.

ಪೋಪ್ ಫ್ರಾನ್ಸಿಸ್ ಅವರು ನಗರದೊಳಕ್ಕೆ ಆಗಮಿಸುತ್ತಿದ್ದಂತೆ ಇಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ಪೋಪ್ ಫ್ರಾನ್ಸಿಸ್ ಅವರೆಡೆಗೆ ಕೈ ಭಿಸುವ ಮೂಲಕ, ಘೋಷವಾಕ್ಯಗಳನ್ನು ಕೂಗುವ ಮೂಲಕ ಸಂಭ್ರಮದಿಂದ ಬರಮಾಡಿಕೊಂಡರು. ಕಟ್ಟಡಗಳ ಮೇಲಿನ ಮಹಡಿಗಳಿಂದಲೂ ಸಹ ಜನರು ಪೋಪ್ ಫ್ರಾನ್ಸಿಸ್ ಅವರಿಗೆ ಸ್ವಾಗತವನ್ನು ಕೋರಿದರು. ಈ ದಿನ ಪೋಪ್ ಫ್ರಾನ್ಸಿಸ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.  

15 December 2024, 13:25