ವ್ಯಾಟಿಕನ್ನಿಗೆ ಮೊಬೈಲ್ ಬ್ರಾಡ್ಕಾಸ್ಟಿಂಗ್ ಯೂನಿಟ್ ವಾಹನವನ್ನು ನೀಡಿದ ನೈಟ್ಸ್ ಆಫ್ ಕೊಲಂಬಸ್
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ನೈಟ್ಸ್ ಆಫ್ ಕೊಲಂಬಸ್ ಕಥೋಲಿಕ ಸಂಘಟನೆಯವರು ವ್ಯಾಟಿಕನ್ನಿಗೆ ನೂತನ ಮೊಬೈಲ್ ಬ್ರಾಡ್ಕಾಸ್ಟಿಂಗ್ ಯೂನಿಟ್ ವಾಹನವನ್ನು ದಾನವಾಗಿ ನೀಡಿದ್ದಾರೆ. ಈ ವೇಳೆ ನೈಟ್ಸ್ ಆಫ್ ಕೊಲಂಬಸ್ ನ ಸುಪ್ರೀಂ ನೈಟ್ ಪ್ಯಾಟ್ರಿಕ್ ಕೆಲ್ಲಿ, ವ್ಯಾಟಿಕನ್ ಮಾಧ್ಯಮ ಪೀಠದ ನಿರ್ದೇಶಕ ಪೌಲೋ ರುಫ್ಫಿನಿ ಅವರು ಸಂತರುಗಳ ಪದವಿಯ ಪೀಠದ ಕಾರ್ಯದರ್ಶಿ ಕಾರ್ಡಿನಲ್ ಮಾರ್ಸೆಲ್ಲೋ ಸೆಮೆರಾರೋ ಅವರು ಇದನ್ನು ಉದ್ಘಾಟಿಸಿದ ವೇಳೆ ಉಪಸ್ಥಿತರಿದ್ದರು.
ಈ ಕುರಿತು ವ್ಯಾಟಿಕನ್ ರೇಡಿಯೋಗೆ ಮಾತನಾಡಿದ ನೈಟ್ಸ್ ಆಫ್ ಕೊಲಂಬಸ್ ನ ಸುಪ್ರೀಂ ನೈಟ್ ಪ್ಯಾಟ್ರಿಕ್ ಕೆಲ್ಲಿ ಅವರು "ಇಂತಹ ಒಂದು ಕಾರ್ಯವನ್ನು ಮಾಡಲು ನಮಗೆ ಆಗಿದೆ ಎಂದು ತಿಳಿಯಲು ನಮಗೆ ಸಂತೋಷವಾಗುತ್ತಿದೆ. ಏಕೆಂದರೆ, ಇದರಿಂದ ವಿಶ್ವದ ಮೂಲೆ ಮೂಲೆಗೆ ಪೋಪ್ ಫ್ರಾನ್ಸಿಸ್ ಅವರ ಧ್ವನಿಯನ್ನು ತಲುಪಿಸಬಹುದಾಗಿದೆ" ಎಂದು ಹೇಳಿದರು.
ಪೋಪ್ ಫ್ರಾನ್ಸಿಸ್ ಹಾಗೂ ವ್ಯಾಟಿಕನ್ನಿನ ಪರವಾಗಿ ಮಾತನಾಡಿದ ಕಾರ್ಡಿನಲ್ ಸೆಮೆರಾರೋ ಅವರು ನೈಟ್ಸ್ ಆಫ್ ಕೊಲಂಬಸ್ ಸಂಸ್ಥೆಯ ಹೃದಯ ವೈಶಾಲ್ಯಕ್ಕಾಗಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು ಮಾತ್ರವಲ್ಲದೆ ಅವರ ಕಾರ್ಯಗಳನ್ನು ಶ್ಲಾಘಿಸಿದರು. "ಜ್ಯೂಬಿಲಿ ವರ್ಷದಲ್ಲಿ ಈ ಮೊಬೈಲ್ ಪ್ರಸರಣ ವಾಹನವು ವ್ಯಾಟಿಕನ್ ಮಾಧ್ಯಮ ಸೇವೆಗೆ ವರದಾನವಾಗಿದ್ದು, ಇದರಲ್ಲಿ ಪೋಪ್ ಫ್ರಾನ್ಸಿಸ್ ಹಾಗೂ ಧರ್ಮಸಭೆಯ ಧ್ವನಿಯನ್ನು ಪರಿಣಾಮಕಾರಿಯಾಗಿ ಪಸರಿಸಬಹುದು" ಎಂದು ಹೇಳಿದ್ದಾರೆ.