ವ್ಯಾಟಿಕನ್ ಉದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದ ಪೋಪ್ ಫ್ರಾನ್ಸಿಸ್
ವರದಿ: ತಿಝಿಯಾನ ಕಂಪೀಸಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ವಾರ್ಷಿಕ ಕ್ರಿಸ್ಮಸ್ ಆಚರಣೆಯ ವೇಳೆ ವ್ಯಾಟಿಕನ್, ಗವರ್ನರೇಟ್ ಆಫ್ ಹೋಲಿ ಸೀ, ಹಾಗೂ ವಿಕಾರಿಯೇಟ್ ಆಫ್ ರೋಮ್ ನ ಉದ್ಯೋಗಿಗಳನ್ನು ಹಾಗೂ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ವ್ಯಾಟಿಕನ್ ಪೀಠಕ್ಕೆ ಸಲ್ಲಿಸುತ್ತಿರುವ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ವೇಳೆ ಅವರು ನೀವು ಮಾಡುತ್ತಿರುವುದು ದೇವರ ಸಾಮ್ರಾಜ್ಯದ ಕಾರ್ಯ ಎಂದು ಹೇಳಿದ್ದಾರೆ.
ವ್ಯಾಟಿಕನ್ ನಗರದಲ್ಲಿ ವಿವಿಧ ಬೀದಿಗಳು ಹಾಗೂ ವಿವಿಧ ಸ್ಥಳಗಳಲ್ಲಿರುವ ವಿವಿಧ ಪೀಠಗಳ ಕಚೇರಿಗಳನ್ನು ನೋಡಿದರೆ ಜೇನುಗೂಡನ್ನು ನೋಡಿದಂತಾಗುತ್ತದೆ ಎಂದಿರುವ ಪೋಪ್ ಫ್ರಾನ್ಸಿಸ್ ಅವರು, ಇಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದ ಎಲ್ಲರಿಗೂ ಸಹ ಧನ್ಯವಾದಗಳನ್ನು ತಿಳಿಸಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಕೆಲಸದ ಸ್ಥಳದಲ್ಲಿ ವಿವಿಧ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಸಮಸ್ಯೆಗಳು ಉದ್ಭವಿಸುವುದು ಸಹಜ. ಇವೆಲ್ಲವುಗಳನ್ನು ಸಂವಾದದ ಮೂಲಕವೇ ನಾವೆಲ್ಲರೂ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪೋಪ್ ಫ್ರಾನ್ಸಿಸ್ ಅವರು ಕುಟುಂಬದ ಮೌಲ್ಯಗಳ ಕುರಿತು ಮಾತನಾಡಿದರು. "ಒಂದೇ ಕುಟುಂಬವಾಗಿ ನಾವೆಲ್ಲರೂ ಜೀವಿಸಬೇಕು. ಕುಟುಂಬದಲ್ಲಿ ಅನೇಕ ಮೌಲ್ಯಗಳು ಅಡಗಿವೆ. ಈ ಮೌಲ್ಯಗಳನ್ನು ನಾವು ನಮ್ಮ ಕೆಲಸದ ಸ್ಥಳಗಳಲ್ಲಿಯೂ ಸಹ ನಾವು ಆಳವಡಿಸಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.