ಹುಡುಕಿ

ಸಂಘರ್ಷ ಮತ್ತು ವೇದನೆಯಿಂದ ಬಾಧಿತರಾಗಿರುವ ಎಲ್ಲಾ ಕುಟುಂಬಗಳಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್

ವಿಶ್ವಗುರು ಫ್ರಾನ್ಸಿಸ್ ಅವರು ಇಂದು ಅಖಲ ಧರ್ಮಸಭೆಯು ಪವಿತ್ರ ಕುಟುಂಬದ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಸಂಘರ್ಷ ಮತ್ತು ವೇದನೆಯಿಂದ ಬಾಧಿತರಾಗಿರುವ ಎಲ್ಲಾ ಕುಟುಂಬಗಳಿಗಾಗಿ ಪ್ರಾರ್ಥಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವಿಶ್ವಗುರು ಫ್ರಾನ್ಸಿಸ್ ಅವರು ಇಂದು ಅಖಲ ಧರ್ಮಸಭೆಯು ಪವಿತ್ರ ಕುಟುಂಬದ ಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಸಂಘರ್ಷ ಮತ್ತು ವೇದನೆಯಿಂದ ಬಾಧಿತರಾಗಿರುವ ಎಲ್ಲಾ ಕುಟುಂಬಗಳಿಗಾಗಿ ಪ್ರಾರ್ಥಿಸಿದ್ದಾರೆ.

ಈ ವೇಳೆ ದಕ್ಷಿಣ ಕೊರಿಯಾ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಪತನವಾದ ಪರಿಣಾಮ ಸುಮಾರು 177 ಜನರು ಮರಣಹೊಂದಿದ ಕುರಿತು ಮಾತನಾಡಿದ ಪೊಫ್ ಫ್ರಾನ್ಸಿಸ್ ಅವರು ಅವರ ಆತ್ಮಕ್ಕಾಗಿ ಶಾಂತಿಯನ್ನು ಕೋರಿದರು.

ಯುದ್ಧಗಳಿಂದ ಬಳಲುತ್ತಿರುವ ಹಾಗೂ ಯಾತನೆಯನ್ನು ಅನುಭವಿಸುತ್ತಿರುವ ಕುಟುಂಬಗಳನ್ನು ನೆನೆದ ಪೋಪ್ ಫ್ರಾನ್ಸಿಸ್ ಅವರು ಈ ಸಂದರ್ಭದಲ್ಲಿ ಈ ಎಲ್ಲಾ ಕುಟುಂಬಗಳಿಗೆ ಪವಿತ್ರ ಕುಟುಂಬವು ಉಪಶಮನವನ್ನು ನೀಡಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

ಪವಿತ್ರ ಕುಟುಂಬದ ಪ್ರಾಮುಖ್ಯತೆ

ಇಂದು ಪವಿತ್ರ ಕುಟುಂಬದ ಮಹೋತ್ಸವವಾದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ಮಾಡಿದರು. ಈ ವೇಳೆ ಅವರು ಕುಟುಂಬಗಳ ಮಹತ್ವದ ಕುರಿತು ತಿಳಿಸುತ್ತಾ, ಕುಟುಂಬಗಳು ಇನ್ನೂ ಹೆಚ್ಚಾಗಿ ಸಮಯವನ್ನು ಕಳೆಯಬೇಕು. ಒಟ್ಟಾಗಿ ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ.  

ಇಂದಿನ ಶುಭಸಂದೇಶದಲ್ಲಿ ಯೇಸು ಕ್ರಿಸ್ತರು ಹನ್ನೆರಡು ವರ್ಷದ ಬಾಲಕರಾಗಿದ್ದಾಗ ಜೆರುಸಲೇಮಿನ ದೇವಾಲಯದಲ್ಲಿ ಕಾಣೆಯಾಗಿ ಹೋದ ಕುರಿತು ಹಾಗೂ ತದ ನಂತರ ತನ್ನ ಪೋಷಕರಿಗೆ ಮತ್ತೆ ಸಿಕ್ಕ ಕುರಿತು ಮಾತನಾಡಿ, ಚಿಂತನೆಯನ್ನು ನಡೆಸಿದರು.

"ಕುಟುಂಬವೆಂದರೆ ಸಂತೋಷದ ಕ್ಷಣಗಳು ಹಾಗೂ ಸಮಸ್ಯಾತ್ಮಕ ಕ್ಷಣಗಳೂ ಸಹ ಇರುತ್ತವೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಕುಟುಂಬಗಳು ಉತ್ತಮ ಕುಟುಂಬಗಳಾಗಲು ತಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು "ಸಂವಾದಿಸಬೇಕು" ಎಂದು ಹೇಳಿದ್ದಾರೆ. "ನಜರೇತಿನ ಪವಿತ್ರ ಕುಟುಂಬವನ್ನು ನಮ್ಮ ಕುಟುಂಬಗಳ ಆದರ್ಶವೆಂದು ನಾವು ಪರಿಗಣಿಸಬೇಕೆಂದು ವಿಶ್ವಗುರು ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.

ಮುಂದುವರೆದು ಮಾತನಾಡಿರುವ ಅವರು ಒಂದೇ ಕುಟುಂಬವಾಗಿ ಕುಳಿತು ಒಟ್ಟಾಗಿ ಊಟ ಮಾಡುವುದು ಕುಟುಂಬದ ಐಕ್ಯತೆಗೆ ಎಷ್ಟು ಪ್ರಮುಖವಾಗಿದೆ ಎಂಬ ಕುರಿತು ಹೇಳಿದ್ದಾರೆ. ನಮ್ಮ ಕುಟುಂಬಗಳ ಒಳಿತಿಗಾಗಿ ಸದಾ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಬೇಕೆಂದು ಹೇಳಿದ್ದಾರೆ. 

29 December 2024, 15:56