ಹುಡುಕಿ

ತಮ್ಮ 47ನೇ ಪ್ರೇಷಿತ ಭೇಟಿಯನ್ನು ಆರಂಭಿಸಿದ ಪೋಪ್ ಫ್ರಾನ್ಸಿಸ್

ಭಾನುವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರು ಇಟಲಿಯ ರೋಮ್ ನಗರದ ಫಿಯುಮಿಚಿನೋ ವಿಮಾನ ನಿಲ್ದಾಣದ ಮೂಲಕ ಫ್ರಾನ್ಸ್ ದೇಶದ ಕರಾವಳಿಯಲ್ಲಿರುವ ಕಾಸಿಕಾ ದ್ವೀಪಕ್ಕೆ ತಮ್ಮ 47ನೇ ಪ್ರೇಷಿತ ಭೇಟಿಯನ್ನು ಆರಂಭಿಸಿದ್ದಾರೆ.

 ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಭಾನುವಾರ ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ಅವರು ಇಟಲಿಯ ರೋಮ್ ನಗರದ ಫಿಯುಮಿಚಿನೋ ವಿಮಾನ ನಿಲ್ದಾಣದ ಮೂಲಕ ಫ್ರಾನ್ಸ್ ದೇಶದ ಕರಾವಳಿಯಲ್ಲಿರುವ ಕಾಸಿಕಾ ದ್ವೀಪಕ್ಕೆ ತಮ್ಮ 47ನೇ ಪ್ರೇಷಿತ ಭೇಟಿಯನ್ನು ಆರಂಭಿಸಿದ್ದಾರೆ.

ಮೆಡಿಟರೇನಿಯನ್'ಲ್ಲಿ ಪಾಪ್ಯುಲರ್ ರಿಲಿಜಿಯೊಸಿಟಿ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಗುರುಗಳು ಹಾಗೂ ಧಾರ್ಮಿಕ ಸಹೋದರ-ಸಹೋದರಿಯರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪದ ಅಜಾಕ್ಸಿಯೋ ನಗರಕ್ಕೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ವಿಶ್ವಗುರುವಾಗಿದ್ದಾರೆ.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸ್ಥಳೀಯ ಗುರುಗಳು, ಕನ್ಯಾಸ್ತ್ರೀಯರು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಷದಲ್ಲಿ ಭಾಗವಹಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಜೊತೆಗೆ ಅಜಾಕ್ಸಿಯೋ ಧರ್ಮಕ್ಷೇತ್ರದ ಗುರು ಹಾಗು ಪ್ರಸ್ತುತ ಸುಪ್ರೀಂ ಟ್ರಿಬ್ಯುನಲ್ ಆಫ್ ದಿ ಅಪೊಸ್ಟಾಲಿಕ್ ಸಿಗ್ನಾಟುರಾದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಡೊಮಿನಿಕ್ ಮಾಂಬೆರ್ತಿ ಅವರೂ ಸಹ ಇಲ್ಲಿಗೆ ಭೇಟಿ ನೀಡಲಿದ್ದಾರೆ.

ಭಾನುವಾರ ಮಧ್ಯಾಹ್ನ ಪೋಪ್ ಫ್ರಾನ್ಸಿಸ್ ಅವರು ಇಲ್ಲಿ ಬಲಿಪೂಜೆಯನ್ನು ಅರ್ಪಿಸಿ, ತದ ನಂತರ ಅಜಾಕ್ಸಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ.

15 December 2024, 08:58