ಕಲೆಯ ಮೂಲಕ ಶಾಂತಿ ಹಾಗೂ ಭರವಸೆಯನ್ನು ನಿರ್ಮಿಸುವಂತೆ ಕಲಾವಿದರಿಗೆ ಕರೆ ನೀಡಿದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು 2024 ರ ಕ್ರಿಸ್ಮಸ್ ಕಾರ್ಯಕ್ರಮವನ್ನು ನೀಡುವ ಕಲಾವಿದರು ಹಾಗೂ ತಂತ್ರಜ್ಞರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಅವರು ನಿಮ್ಮ ಪ್ರತಿಭೆ ಹಾಗೂ ಕಲೆಯ ಮೂಲಕ ಶಾಂತಿ ಹಾಗೂ ಭರವಸೆಯನ್ನು ನಿರ್ಮಿಸುವಂತೆ ಕರೆ ನೀಡಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರು 2024 ರ ಕ್ರಿಸ್ಮಸ್ ಕಾರ್ಯಕ್ರಮವನ್ನು ನೀಡುವ ಕಲಾವಿದರು ಹಾಗೂ ತಂತ್ರಜ್ಞರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ವೇಳೆ ಅವರು ನಿಮ್ಮ ಪ್ರತಿಭೆ ಹಾಗೂ ಕಲೆಯ ಮೂಲಕ ಶಾಂತಿ ಹಾಗೂ ಭರವಸೆಯನ್ನು ನಿರ್ಮಿಸುವಂತೆ ಕರೆ ನೀಡಿದ್ದಾರೆ.

ಈ ವರ್ಷ ವ್ಯಾಟಿಕನ್ ನಗರದಲ್ಲಿ ಈ ಕಲಾವಿದರು ಕ್ರಿಸ್ಮಸ್ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇವರು 1991 ರಿಂದ ಇದನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಟಿಕೆಟ್ ವ್ಯವಸ್ಥೆಯಿದ್ದು, ಇದರಿಂದ ಬರುವ ಹಣವನ್ನು ಸಲೇಷಿಯನ್ ಸಭೆಯ ಸುವಾರ್ತಾ ಪ್ರಸಾರ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.

ಈ ಕಾರ್ಯಕ್ರಮದ ಆಯೋಜಕರ ಬದ್ಧತೆಯನ್ನು ಹಾಗೂ ಅವರ ಶ್ರಮವನ್ನು ಶ್ಲಾಘಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂಗೀತ ಎಂಬುದು ಒಂದು ರೀತಿಯ ಮಾಂತ್ರಿಕ ಶಕ್ತಿಯಾಗಿದ್ದು, ಇದಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ" ಎಂದು ಹೇಳಿದ್ದಾರೆ. ಕಲಾವಿದರಿಗೆ ಸಮಾಜಕ್ಕೆ ನೀಡಲು ಬೇಕಾದಷ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯೇಸುಕ್ರಿಸ್ತರು ದನದ ಕೊಟ್ಟಿಗೆಯಲ್ಲಿ "ಮೌನದ ರಾತ್ರಿಯಲ್ಲಿ" ಜನಿಸಿದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸೈಲೆಂಟ್ ನೈಟ್" ಗೀತೆಯನ್ನು ನೆನಪಿಸಿಕೊಂಡು, ಹೇಗೆ ಅದು ಪ್ರಪಂಚದ ನೂರಾರು ಭಾಷೆಗಳಿಗೆ ಅನುವಾದವಾಗಿದೆ ಹಾಗೂ ಸುಶ್ರಾವ್ಯವಾಗಿ ಇಂದಿಗೂ ಅದನ್ನು ಹಾಡಲಾಗುತ್ತದೆ ಎಂಬ ಕುರಿತು ಹೇಳುತ್ತಾ, ಅದೇ ಸಂಗೀತಕ್ಕಿರುವ ಶಕ್ತಿ ಎಂದು ಹೇಳಿದರು.

ಭರವಸೆ ಎಂಬುದು ದೇವರ ವರದಾನವಾಗಿದ್ದು, ನಾವೆಲ್ಲರೂ ಶಾಂತಿಯನ್ನು ತರುವ ದೇವದೂತರಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಕಲಾವಿದರಿಇಗೆ ಹೇಳಿದರು.

14 December 2024, 15:45