ಜರ್ಮನಿಯಲ್ಲಿ ನಡೆದ ದಾಳಿಯ ಸಂತ್ರಸ್ಥರಿಗೆ ಐಕ್ಯತೆ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಜರ್ಮನಿಯ ಮಾರುಕಟ್ಟೆ ಪ್ರದೇಶದಲ್ಲಿ ನೆರೆದಿದ್ದ ಜನರ ಗುಂಪಿನ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಒಮ್ಮೆಲೆ ಹರಿದ ಪರಿಣಾಮ ಐವರು ಮೃತಪಟ್ಟಿದ್ದು, ಸುಮಾರು ಇನ್ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಕುರಿತು ಜರ್ಮನಿ ದೇಶದ ಪ್ರಧಾನಿ ಸ್ಟೇನ್'ಮೀಯರ್ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಗಳಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪೀಟರ್ ಪರೋಲಿನ್ ಅವರು ಸಹಿ ಹಾಕಿದ್ದಾರೆ. ಜರ್ಮನಿಯ ಪ್ರಧಾನಮಂತ್ರಿ ಆಗಿರುವ ಫ್ರಾಂಕ್-ವಾಲ್ಟರ್ ಸ್ಟೇನ್'ಮೀಯರ್ ಅವರಿಗೆ ಈ ಸಂದೇಶವನ್ನು ಕಳುಹಿಸಲಾಗಿದೆ.
ಪೋಪ್ ಫ್ರಾನ್ಸಿಸ್ ಅವರು ಈ ದಾಳಿಯನ್ನು ಖಂಡಿಸಿದ್ದು, ಮೃತರಿಗೆ ಕಂಬನಿಯನ್ನು ಮಿಡಿದಿದ್ದಾರೆ ಹಾಗೂ ಇದರಿಂದ ನೋವನ್ನು ಅನುಭವಿಸುತ್ತಿರುವ ಎಲ್ಲರಿಗೂ ಪ್ರಾರ್ಥನೆಯ ಭರವಸೆಯನ್ನು ನೀಡಿದ್ದಾರೆ.