ಹುಡುಕಿ

ಕಾರ್ಡಿನಲ್ ಪರೋಲಿನ್: ಕಾಸಿಕದಲ್ಲಿ ಪೋಪ್ ಪ್ರಾರ್ಥನೆ ಮತ್ತು ಜವಾಬ್ದಾರಿಗೆ ಕರೆ ನೀಡುತ್ತಾರೆ

ಡಿಸೆಂಬರ್ 15 ರಂದು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಭಾಗವಾಗಿರುವ ಕಾಸಿಕಾ ದೇಶದ ಅಜಾಕ್ಸಿಯೋ ದ್ವೀಪ ನಗರಕ್ಕೆ ಭೇಟಿ ನೀಡಲಿದ್ದು, ಆ ಸಂಬಂಧ ಎಲ್ಲಾ ರೀತಿಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದು, ಪೋಪ್ ಫ್ರಾನ್ಸಿಸ್ ಅವರ ಈ ಪ್ರೇಷಿತ ಭೇಟಿಯ ಪ್ರಮುಖ ವಿದ್ಯಾಮಾನಗಳ ಕುರಿತು ಮಾತನಾಡಿದ್ದಾರೆ.

ವರದಿ: ಮಸ್ಸಿಮಿಲಿಯಾನೋ ಮೆನಿಕೆತ್ತಿ, ಅಜಯ್ ಕುಮಾರ್

ಡಿಸೆಂಬರ್ 15 ರಂದು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಭಾಗವಾಗಿರುವ ಕಾಸಿಕಾ ದೇಶದ ಅಜಾಕ್ಸಿಯೋ ದ್ವೀಪ ನಗರಕ್ಕೆ ಭೇಟಿ ನೀಡಲಿದ್ದು, ಆ ಸಂಬಂಧ ಎಲ್ಲಾ ರೀತಿಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದು, ಪೋಪ್ ಫ್ರಾನ್ಸಿಸ್ ಅವರ ಈ ಪ್ರೇಷಿತ ಭೇಟಿಯ ಪ್ರಮುಖ ವಿದ್ಯಾಮಾನಗಳ ಕುರಿತು ಮಾತನಾಡಿದ್ದಾರೆ.

"ಪೋಪ್ ಫ್ರಾನ್ಸಿಸ್ ಅವರು ತಮ್ಮ ಈ ಪ್ರೇಷಿತ ಭೇಟಿಯಲ್ಲಿ ಇಲ್ಲಿನ ಸ್ಥಳೀದ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರಿಗೆ ಹಾಗೂ ಭಕ್ತಾಧಿಗಳಿಗೆ ಪ್ರಾರ್ಥನೆಯ ಪ್ರಾಮುಖ್ಯತೆಯ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ ಇಲ್ಲಿನ ಸ್ಥಳೀಯ ಧರ್ಮಸಭೆಯಾಗಿ ಅವರಿಗೆ ಇರುವ ಜವಾಬ್ದಾರಿಗಳ ಕುರಿತು ತಿಳಿಹೇಳಲಿದ್ದಾರೆ" ಎಂದು ಕಾರ್ಡಿನಲ್ ಪರೋಲಿನ್ ಅವರು ಹೇಳಿದ್ದಾರೆ.

"ಪೋಪ್ ಫ್ರಾನ್ಸಿಸ್ ಅವರಿಗೆ ಸಂವಾದದ ಕುರಿತು ಎಷ್ಟು ಕಾಳಜಿ ಇದೆ ಹಾಗೂ ಅವರು ಅದಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಇಲ್ಲಿನ ಸ್ಥಳೀಯ ಧರ್ಮಸಭೆ ಸೇರಿದಂತೆ ವಿವಿಧ ಕ್ರೈಸ್ತ ಪಂಗಡಗಳು ಹಾಗೂ ಇನ್ನಿತರ ವಿಶ್ವಾಸಗಳ ಒಗ್ಗಟ್ಟಿನ ಕುರಿತಂತೆ ಸಹ ಅವರು ಮಾತನಾಡಲಿದ್ದಾರೆ" ಎಂದು ಕಾರ್ಡಿನಲ್ ಪರೋಲಿನ್ ಅವರು ಹೇಳಿದ್ದಾರೆ.

ಕಾಸಿಕಾ ದ್ವೀಪಕ್ಕೆ ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಭೇಟಿ

ಭಾನುವಾರ, ಡಿಸೆಂಬರ್ 15 ರಂದು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದಲ್ಲಿರುವ ಕಾಸಿಕಾ ದ್ವೀಪಕ್ಕೆ ತಮ್ಮ 47ನೇ ಪ್ರೇಷಿತ ಭೇಟಿಯನ್ನು ನೀಡುತ್ತಿದ್ದಾರೆ. ಮೆಡಿಟರೇನಿಯನ್'ಲ್ಲಿ ಪಾಪ್ಯುಲರ್ ರಿಲಿಜಿಯೊಸಿಟಿ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಗುರುಗಳು ಹಾಗೂ ಧಾರ್ಮಿಕ ಸಹೋದರ-ಸಹೋದರಿಯರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪದ ಅಜಾಕ್ಸಿಯೋ ನಗರಕ್ಕೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ವಿಶ್ವಗುರುವಾಗಿದ್ದಾರೆ. 1952 ರಲ್ಲಿ ಪ್ರೇಷಿತ ರಾಯಭಾರಿಯಾಗಿದ್ದ ಎಂಜೆಲೋ ರೊಂಕಾಲ್ಲಿ ಅವರು ಈ ದ್ವೀಪಕ್ಕೆ ಭೇಟಿ ನೀಡಿದರು. ಅವರು ತದನಂತರ ವಿಶ್ವಗುರುವಾಗಿ ಚುನಾಯಿತರಾದರು. ಅವರೇ ಪೋಪ್ ಇಪ್ಪತ್ಮೂರನೇ ಜಾನರು. ಈ ಕುರಿತು ವ್ಯಾಟಿಕನ್ ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ನೆನಪಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿರುವ ಮತ್ತಿಯೋ ಬ್ರೂನಿ ಅವರು "ಇಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ದ್ವೀಪದ ಕ್ರೈಸ್ತ ಭಕ್ತಾಧಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ. ತದನಂತರ ಇಲ್ಲಿನ ಅಜಾಕ್ಸಿಯೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಫ್ರಾನ್ಸಿಸ್ ಕ್ಸೇವಿಯರ್ ಬುಸ್ಟಿಲ್ಲೋ ಅವರು ಆಯೋಜಿಸಿರುವ ಪಾಪ್ಯುಲರ್ ರಿಲಿಜಿಯೋಸಿಟಿ ಎಂಬ ಸಮಾವೇಷದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸ್ಥಳೀಯ ಗುರುಗಳು, ಕನ್ಯಾಸ್ತ್ರೀಯರು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಷದಲ್ಲಿ ಭಾಗವಹಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಜೊತೆಗೆ ಅಜಾಕ್ಸಿಯೋ ಧರ್ಮಕ್ಷೇತ್ರದ ಗುರು ಹಾಗು ಪ್ರಸ್ತುತ ಸುಪ್ರೀಂ ಟ್ರಿಬ್ಯುನಲ್ ಆಫ್ ದಿ ಅಪೊಸ್ಟಾಲಿಕ್ ಸಿಗ್ನಾಟುರಾದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಡೊಮಿನಿಕ್ ಮಾಂಬೆರ್ತಿ ಅವರೂ ಸಹ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯ ನಿರ್ದೇಶಕರು ಹೇಳಿದ್ದಾರೆ.

14 December 2024, 16:12