ಕಾರಿತಾಸ್ ಸಂಸ್ಥೆಗೆ ಪೋಪ್ ಫ್ರಾನ್ಸಿಸ್: ಸುಜ್ಞಾನದ ಶಿಕ್ಷಕರಾಗಿರಿ
ವರದಿ: ಫ್ರಾನ್ಸೆಸ್ಕಾ ಮೆರ್ಲೋ, ಅಜಯ್ ಕುಮಾರ್
ಕಾರಿತಾಸ್ ಟೊಲೀಡೋ ಸಂಸ್ಥೆಯ ಅರವತ್ತು ವರ್ಷಗಳ ಸೇವೆಯನ್ನು ಶ್ಲಾಘಿಸಿರುವ ಪೋಪ್ ಫ್ರಾನ್ಸಿಸ್ ಅವರು ದಾನಶೀಲತೆ, ನ್ಯಾಯ ಹಾಗೂ ಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವುದನ್ನು ಮುಂದುವರೆಸಬೇಕೆಂದು ಅದರ ಸದಸ್ಯರಿಗೆ ಹೇಳಿದ್ದಾರೆ.
ಸ್ಪೇನ್ ದೇಶದ ಟೊಲೀಡೋ ಪ್ರಾಂತ್ಯದಿಂದ ಆಗಮಿಸಿದ್ದ ಅಲ್ಲಿನ ಕಾರಿತಾಸ್ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್ ಅವರು, ದಾನಶೀಲತೆ ಹಾಗೂ ಸೇವೆಯ ಹಿನ್ನೆಲೆಯಲ್ಲಿ ಅವರು ಬದ್ಧತೆಯನ್ನು ಶ್ಲಾಘಿಸಿದರು. ದಾನಶೀಲತೆಯು ಕೇವಲ ದಾನ ಮಾಡುವುದಲ್ಲ ಬದಲಿಗೆ ಅದು ಸಹ ಒಂದು ರೀತಿಯ ಶುಭ ಸಂದೇಶ ಕಾರ್ಯವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
"ದಾನಶೀಲತೆ ಎಂಬುದು ಮಾನವ ಹಾಗೂ ಆಧ್ಯಾತ್ಮಿಕ ಕ್ರಿಯೆಯಿಂದ ಉಂಟಾಗುತ್ತದೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ದಾನಶೀಲತೆಯ ಬದ್ಧತೆಯ ಮೂಲಕ ಸಹಭಾಗಿತ್ವದಲ್ಲಿ ಸುವಾರ್ತಾ ಪ್ರಸಾರ ಕಾರ್ಯವನ್ನು ಮುಂದುವರೆಸಬೇಕೆಂದು ಪೋಪ್ ಫ್ರಾನ್ಸಿಸ್ ಈ ಸಂಸ್ಥೆಯ ಸದಸ್ಯರಿಗೆ ಹೇಳಿದರು.