ಹುಡುಕಿ

"ಯೇಸುಕ್ರಿಸ್ತರು ಭರವಸೆ" ಎಂಬ ಕುರಿತು ವಿಶ್ವಗುರು ಫ್ರಾನ್ಸಿಸರು ಧರ್ಮೋಪದೇಶ ಅರಂಭಿಸಿದ್ದಾರೆ

ಇನ್ನೇನು ಜೂಬಿಲಿ ದ್ವಾರಗಳನ್ನು ತೆರೆಯಲು ಒಂದು ವಾರ ಮಾತ್ರ ಇರುವ ಹಿನ್ನೆಲೆಯಲ್ಲಿ ವಿಶ್ವಗುರು ಪ್ರಾರ್ಥಿಸುವರು ಇಂದು ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. "ಯೇಸುಕ್ರಿಸ್ತರು ಭರವಸೆ" ಎಂಬ ವಿಷಯದ ಕುರಿತು ಅವರು ಇಂದಿನಿಂದ ಧರ್ಮೋಪದೇಶ ಸರಣಿಯನ್ನು ಆರಂಭಿಸಿದ್ದಾರೆ. ಕುರಿತು ಜೂಬಿಲಿ ವರ್ಷದ ಅತ್ಯಂತ ಪೋಪ್ ಫ್ರಾನ್ಸಿಸ್ ಅವರು ಈ ಧರ್ಮೋಪದೇಶ ಸರಣಿಯನ್ನು ಮುಂದುವರೆಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಯೇಸುಕ್ರಿಸ್ತರನ್ನು "ನಮ್ಮ ಯಾತ್ರೆಯ ಗುರಿ" ಎಂದು ಬಣ್ಣಿಸಿದ್ದು, ಸಂತ ಮತ್ತಾಯ ಹಾಗೂ ಸಂತ ಲೂಕರ ಶುಭಸಂದೇಶದಲ್ಲಿ ಅವರ ಕುರಿತು ಇರುವ ವಿಷಯಗಳ ಕುರಿತು ಪೋಪ್ ಫ್ರಾನ್ಸಿಸ್ ಚಿಂತನೆಯನ್ನು ನೀಡಿದರು.

ಮುಂದಿನ ದಿನಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಇಡೀ ವರ್ಷದಾದ್ಯಂತ ಯೇಸುವಿನ ಬಾಲ್ಯ ಸೇರಿದಂತೆ ಅವರ ಬದುಕಿನ ವಿವಿಧ ಮಜಲುಗಳಲ್ಲಿ ರೂಪಿತಗೊಂಡ ಭರವಸೆಯ ಅಂಶಗಳ ಕುರಿತು ಪೋಪ್ ಫ್ರಾನ್ಸಿಸ್ ಅವರು ಪ್ರತಿವಾರ ಚಿಂತನೆಯನ್ನು ನಡೆಸಲಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಯೇಸುವಿನ ಜನನದ ವಂಶಾವಳಿಯ ಕುರಿತು ಮಾತನಾಡಿದ್ದಾರೆ ಹಾಗೂ ಮಾತೆ ಮರಿಯಮ್ಮನವರ ಕುರಿತೂ ಸಹ ಮಾತನಾಡಿದ್ದಾರೆ.

"ಯೇಸುಕ್ರಿಸ್ತರು ಅರಸರ ವಂಶದಲ್ಲಿ ಹುಟ್ಟಿದರೂ ಸಹ ಅವರು ಎಲ್ಲಾ ಜನರ ಉದ್ಧಾರಕರು ಹಾಗೂ ಪ್ರಭುವೂ ಆಗಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಪೋಪ್ ಫ‌್ರಾನ್ಸಿಸ್ ಅವರು ಜ್ಯೂಬಿಲಿ ವರ್ಷದಲ್ಲಿ ಧರ್ಮೋಪದೇಶವನ್ನು ಮುಂದುವರೆಸಲಿದ್ದಾರೆ.

18 December 2024, 16:41