ರೋಮ್ ನಾಗರಿಕರಿಗೆ ಪೋಪ್: ಜ್ಯೂಬಿಲಿ ವರ್ಷದಲ್ಲಿ ನಿಮ್ಮ ಮನೆಗಳನ್ನು ತೆರೆಯಿರಿ

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಜ್ಯೂಬಿಲಿ ವರ್ಷದಲ್ಲಿ ಲಕ್ಷಾಂತರ ಯಾತ್ರಿಕರು ರೋಮ್ ನಗರಕ್ಕೆ ಆಗಮಿಸುವ ಹಿನ್ನೆಲೆ ಅವರಿಗೆ ನಿಮ್ಮ ಮನೆಗಳನ್ನು ತೆರೆಯಿರಿ ಎಂದು ಹೇಳಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಜ್ಯೂಬಿಲಿ ವರ್ಷದಲ್ಲಿ ಲಕ್ಷಾಂತರ ಯಾತ್ರಿಕರು ರೋಮ್ ನಗರಕ್ಕೆ ಆಗಮಿಸುವ ಹಿನ್ನೆಲೆ ಅವರಿಗೆ ನಿಮ್ಮ ಮನೆಗಳನ್ನು ತೆರೆಯಿರಿ ಎಂದು ಹೇಳಿದ್ದಾರೆ.

ಮುಂದಿನ ಜ್ಯೂಬಿಲಿ ವರ್ಷದಲ್ಲಿ ನಡೆಯುತ್ತಿರುವ "ಹದಿ ಹರೆದವರ ಜ್ಯೂಬಿಲಿ", "ಯುವ ಸಮೂಹದ ಜ್ಯೂಬಿಲಿ" ಕಾರ್ಯಕ್ರಮಗಳ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ನಾಗರೀಕರಿಗೆ ಸಂದೇಶವನ್ನು ಕಳುಹಿಸಿದ್ದು, ಪವಿತ್ರ ಯಾತ್ರೆಗಾಗಿ ಬರುತ್ತಿರುವ ಯುವ ಸಮೂಹಕ್ಕೆ ಆತಿಥ್ಯವನ್ನು ನೀಡಿ, ನೆರವಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಯಾತ್ರಿಕರ ಕುಟುಂಬಗಳಿಗೆ, ವಿಶೇಷವಾಗಿ ಯುವ ಸಮೂಹಕ್ಕೆ ನೀವು ನಿಮ್ಮ ಮನೆಗಳಲ್ಲಿ ನೆರವನ್ನು ನೀಡಬೇಕು. ಇಟಲಿಯ ಬೇಸಿಗೆ ಅತ್ಯಂತ ಭೀಕರವಾಗಿರುವ ಕಾರಣ ಅವರಿಗೆ ತುಸು ಹೆಚ್ಚು ಆತಿಥ್ಯದ ಅವಶ್ಯಕತೆ ಇದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಈ ಜ್ಯೂಬಿಲಿ ಎಂಬುದು ಯುವ ಸಮೂಹವು ತಮ್ಮಲ್ಲಿನ ದೇವರ ಪ್ರೀತಿಯನ್ನು ತೋರ್ಪಡಿಸಲು ಹಾತೊರೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನೆರವಾಗಲು ನೀವು ಉದಾರವಾಗಿ ಅವರಿಗೆ ಆತಿಥ್ಯವನ್ನು ವಹಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

12 December 2024, 15:48