ಹುಡುಕಿ

ಭಾನುವಾರ ಕಾಸಿಕ ದ್ವೀಪಕ್ಕೆ ಭೇಟಿ ನೀಡಲಿರುವ ಪೋಪ್ ಫ್ರಾನ್ಸಿಸ್

ಭಾನುವಾರ, ಡಿಸೆಂಬರ್ 15 ರಂದು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದಲ್ಲಿರುವ ಕಾಸಿಕಾ ದ್ವೀಪಕ್ಕೆ ತಮ್ಮ 47ನೇ ಪ್ರೇಷಿತ ಭೇಟಿಯನ್ನು ನೀಡುತ್ತಿದ್ದಾರೆ. ಮೆಡಿಟರೇನಿಯನ್'ಲ್ಲಿ ಪಾಪ್ಯುಲರ್ ರಿಲಿಜಿಯೊಸಿಟಿ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಗುರುಗಳು ಹಾಗೂ ಧಾರ್ಮಿಕ ಸಹೋದರ-ಸಹೋದರಿಯರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ.

ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್

ಭಾನುವಾರ, ಡಿಸೆಂಬರ್ 15 ರಂದು ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದಲ್ಲಿರುವ ಕಾಸಿಕಾ ದ್ವೀಪಕ್ಕೆ ತಮ್ಮ 47ನೇ ಪ್ರೇಷಿತ ಭೇಟಿಯನ್ನು ನೀಡುತ್ತಿದ್ದಾರೆ. ಮೆಡಿಟರೇನಿಯನ್'ಲ್ಲಿ ಪಾಪ್ಯುಲರ್ ರಿಲಿಜಿಯೊಸಿಟಿ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಗುರುಗಳು ಹಾಗೂ ಧಾರ್ಮಿಕ ಸಹೋದರ-ಸಹೋದರಿಯರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪದ ಅಜಾಕ್ಸಿಯೋ ನಗರಕ್ಕೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ವಿಶ್ವಗುರುವಾಗಿದ್ದಾರೆ. 1952 ರಲ್ಲಿ ಪ್ರೇಷಿತ ರಾಯಭಾರಿಯಾಗಿದ್ದ ಎಂಜೆಲೋ ರೊಂಕಾಲ್ಲಿ ಅವರು ಈ ದ್ವೀಪಕ್ಕೆ ಭೇಟಿ ನೀಡಿದರು. ಅವರು ತದನಂತರ ವಿಶ್ವಗುರುವಾಗಿ ಚುನಾಯಿತರಾದರು. ಅವರೇ ಪೋಪ್ ಇಪ್ಪತ್ಮೂರನೇ ಜಾನರು. ಈ ಕುರಿತು ವ್ಯಾಟಿಕನ್ ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ನೆನಪಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿರುವ ಮತ್ತಿಯೋ ಬ್ರೂನಿ ಅವರು "ಇಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ದ್ವೀಪದ ಕ್ರೈಸ್ತ ಭಕ್ತಾಧಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಿದ್ದಾರೆ. ತದನಂತರ ಇಲ್ಲಿನ ಅಜಾಕ್ಸಿಯೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿರುವ ಕಾರ್ಡಿನಲ್ ಫ್ರಾನ್ಸಿಸ್ ಕ್ಸೇವಿಯರ್ ಬುಸ್ಟಿಲ್ಲೋ ಅವರು ಆಯೋಜಿಸಿರುವ ಪಾಪ್ಯುಲರ್ ರಿಲಿಜಿಯೋಸಿಟಿ ಎಂಬ ಸಮಾವೇಷದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸ್ಥಳೀಯ ಗುರುಗಳು, ಕನ್ಯಾಸ್ತ್ರೀಯರು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಷದಲ್ಲಿ ಭಾಗವಹಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಜೊತೆಗೆ ಅಜಾಕ್ಸಿಯೋ ಧರ್ಮಕ್ಷೇತ್ರದ ಗುರು ಹಾಗು ಪ್ರಸ್ತುತ ಸುಪ್ರೀಂ ಟ್ರಿಬ್ಯುನಲ್ ಆಫ್ ದಿ ಅಪೊಸ್ಟಾಲಿಕ್ ಸಿಗ್ನಾಟುರಾದ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಡೊಮಿನಿಕ್ ಮಾಂಬೆರ್ತಿ ಅವರೂ ಸಹ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯ ನಿರ್ದೇಶಕರು ಹೇಳಿದ್ದಾರೆ.

13 December 2024, 14:11