ಕಾಸಿಕಾದಲ್ಲಿ ಪೋಪ್: ಪ್ರಖ್ಯಾತ ಭಕ್ತಿ ಆಚರಣೆ ಸುವಾರ್ತಾ ಪ್ರಸಾರ ಹಾಗೂ ಸಮುದಾಯವನ್ನು ಪೋಷಿಸುತ್ತದೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
"ಮೆಡಿಟರೇನಿಯನ್ನಿನಲ್ಲಿ ಪ್ರಖ್ಯಾತ ಭಕ್ತಿ ಆಚರಣೆಗಳು" ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಅತ್ಯಂತ ವೇಗವಾಗಿ ಜಾತ್ಯಾತೀತವಾಗುತ್ತಿರುವ ಸಮಾಜ ಹಾಗೂ ಸಮುದಾಯಗಳಲ್ಲಿ ಪ್ರಖ್ಯಾತ ಭಕ್ತಿ ಆಚರಣೆಗಳು ಎಂತಹ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬ ಕುರಿತು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ದ್ವೀಪವಾದ ಕಾಸಿಕಾಕ್ಕೆ ಭೇಟಿ ನೀಡಿದ್ದು, ಅಲ್ಲಿನ ಅಜಾಕ್ಸಿಯೋ ನಗರದಲ್ಲಿ ಈ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
"ಹಳತಾಗಿ ಜಾನಪದ ರೀತಿಯ ನಿರೂಪಣೆಯನ್ನು ಹೊಂದಿರುವ ಭಕ್ತಿ ಆಚರಣೆಗಳು ತೀವ್ರವಾಗಿ ಜಾತ್ಯಾತೀತವಾಗುತ್ತಿರುವ ಸಮಾಜ ಹಾಗೂ ಸಮುದಾಯಗಳಿಗೆ ಪಥ್ಯವಾಗುವುದಿಲ್ಲ. ವಿಶ್ವಾಸವನ್ನು ಮೂಲದಲ್ಲಿ ಉಳಿಸಿಕೊಂಡು ಮುಂದುವರೆಯುತ್ತಿರುವ ಪ್ರಖ್ಯಾತ ಭಕ್ತಿ ಆಚರಣೆಗಳು ಸರ್ವವ್ಯಾಪಿ ಒಪ್ಪಿತವಾಗುತ್ತಿವೆ ಹಾಗೂ ಸುವಾರ್ತಾ ಪ್ರಸಾರವನ್ನು ಪೋಷಿಸುತ್ತಿವೆ" ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದಿದ್ದಾರೆ.
"ಅನೇಕ ಮುಂದುವರೆದ ನಾಗರೀಕತೆಗಳ ತೊಟ್ಟಿಲಾಗಿರುವ ಮೆಡಿಟರೇನಿಯನ್ ಐತಿಹಾಸಿಕವಾಗಿ ಸಂಸ್ಕೃತಿಗಳು, ಯೋಜನೆಗಳೂ ಸೇರಿದಂತೆ ವಿವಿಧ ಆವಿಷ್ಕಾರಗಳಿಗೆ ರಹದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿನ ಕ್ರೈಸ್ತ ಹಾಗೂ ಜಾತ್ಯಾತೀತ ಸಂಸ್ಕೃತಿಗಳ ನಡುವೆ ಸಂವಾದವನ್ನು ಏರ್ಪಡಿಸಬೇಕು ಮಾತ್ರವಲ್ಲದೆ, ಅನೇಕ ರೀತಿಯ ಬೆಳವಣಿಗೆ ಹಾಗೂ ಪ್ರಗತಿಯನ್ನು ಬಿಂಬಿಸುವ ಚರ್ಚೆ ಹಾಗೂ ಸಂವಾದಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು "ಯಾವುದೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದರೂ ಸಹ ನಾವು ಸಂವಾದವನ್ನೇ ಆಯ್ಕೆಮಾಡಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇಲ್ಲಿನ ಪ್ರಖ್ಯಾತ ಭಕ್ತಿ ಆಚರಣೆಗಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಪ್ರಖ್ಯಾತ ಆಚರಣೆಗಳು ಹೇಗೆ ಇಲ್ಲಿನ ಜನರ ವಿಶ್ವಾಸದ ಭಾಗವಾಗಿವೆ ಹಾಗೂ ಅವುಗಳನ್ನು ಹೇಗೆ ಸುವಾರ್ತಾ ಪ್ರಸಾರಕ ಅಂಶಗಳನ್ನಾಗಿ ಪರಿಗಣಿಸಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು. ತ್ಯಂತ ವೇಗವಾಗಿ ಜಾತ್ಯಾತೀತವಾಗುತ್ತಿರುವ ಸಮಾಜ ಹಾಗೂ ಸಮುದಾಯಗಳಲ್ಲಿ ಪ್ರಖ್ಯಾತ ಭಕ್ತಿ ಆಚರಣೆಗಳು ಎಂತಹ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂಬುದರ ಮೇಲೆ ಬೆಳಕನ್ನು ಚೆಲ್ಲಿರುವ ಪೋಪ್ ಫ್ರಾನ್ಸಿಸ್ ಆರೋಗ್ಯಕರ ಜಾತ್ಯಾತೀತತೆಯನ್ನು ಉತ್ತೇಜಿಸಬೇಕು ಹಾಗೂ ಎಲ್ಲರ ಸಾಮಾನ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.