ಹುಡುಕಿ

ಕಾರ್ಸಿಕಾದಲ್ಲಿ ಗುರುಗಳಿಗೆ ಪೋಪ್ ಫ್ರಾನ್ಸಿಸ್: ಎಲ್ಲವನ್ನೂ ಕ್ಷಮಿಸಿ, ಯಾವಾಗಲೂ ಕ್ಷಮಿಸಿ

ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಕರಾವಳಿಯಲ್ಲಿನರುವ ಕಾಸಿಕಾ ದೇಶಕ್ಕೆ ಇಂದು ಭೇಟಿ ನೀಡಿದ್ದು ಇಲ್ಲಿನ ಸ್ಥಳೀಯ ಅಜಾಕ್ಸಿಯೋ ಮಹಾಧರ್ಮಕ್ಷೇತ್ರದ ಗುರುಗಳು ಹಾಗೂ ಧಾರ್ಮಿಕರನ್ನು ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಎಲ್ಲವನ್ನೂ ಕ್ಷಮಿಸಿ, ಯಾವಾಗಲೂ ಕ್ಷಮಿಸಿ ಎಂದು ಹೇಳಿದ್ದಾರೆ.

ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಕರಾವಳಿಯಲ್ಲಿನರುವ ಕಾಸಿಕಾ ದೇಶಕ್ಕೆ ಇಂದು ಭೇಟಿ ನೀಡಿದ್ದು ಇಲ್ಲಿನ ಸ್ಥಳೀಯ ಅಜಾಕ್ಸಿಯೋ ಮಹಾಧರ್ಮಕ್ಷೇತ್ರದ ಗುರುಗಳು ಹಾಗೂ ಧಾರ್ಮಿಕರನ್ನು ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು ಎಲ್ಲವನ್ನೂ ಕ್ಷಮಿಸಿ, ಯಾವಾಗಲೂ ಕ್ಷಮಿಸಿ ಎಂದು ಹೇಳಿದ್ದಾರೆ.  

ಕಾರ್ಸಿಕಾದ ಸ್ವರ್ಗಸ್ವೀಕೃತ ಮಾತೆ ಪ್ರಧಾನಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ನೆರೆದಿದ್ದ ಕಾರ್ಸಿಕಾದ ಧರ್ಮಾಧ್ಯಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರಿಗೆ ಪವಿತ್ರ ತಂದೆ ಫ್ರಾನ್ಸಿಸರು ಇಲ್ಲಿ ಅವರು ತ್ರಿಕಾಲ ಫ್ರಾರ್ಥನೆಯನ್ನು ಮಾಡಿದ ನಂತರ ಕಿವಿಮಾತನ್ನು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಇಂದು ಯೂರೋಪಿನಲ್ಲಿ ಸಂಪನ್ಮೂಲಗಳು ಕಡಿಮೆ ಇವೆ. ಸಮಾಜದಲ್ಲಿ ಹಲವು ಏರಿಳಿತಗಳು ಇವೆ. ಈ ಸಂದರ್ಭದಲ್ಲಿ ನಾವು ನಮ್ಮದೇ ಸ್ವಂತ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಿದ್ದೇವೆ ಎಂಬುದು ತಪ್ಪಾಗುತ್ತದೆ ಹಾಗೂ ಆತ್ಮದ್ರೋಹವಾಗುತ್ತದೆ. ನಾವು ಬದುಕಿನಲ್ಲಿ ದೀನತೆಯನ್ನು ಆಳವಡಿಸಿಕೊಳ್ಳಬೇಕೆಂದು" ಹೇಳಿದರು.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಗುರುಗಳಿಗೆ "ದಯಾಮಯ ದೇವರು ದಯೆಯ ನಿಧಿಯಾಗಿದ್ದು, ನಮಗೆ ಕ್ಷಮೆಯನ್ನು ನೀಡುವಾಗ ನೀವೂ ಸಹ ಎಲ್ಲರ ಪಾಪಗಳನ್ನು ಕ್ಷಮಿಸಿಬೇಕು ಹಾಗೂ ಯಾವಾಗಲೂ ಕ್ಷಮಿಸಬೇಕು" ಎಂದು ಹೇಳಿದ್ದಾರೆ.

"ಧಾರ್ಮಿಕ ಬದುಕು ಎಂಬುದು ಬದುಕಿನಲ್ಲಿ ಒಂದು ಸಲ "ನಿಮ್ಮ ಚಿತ್ತದ ಪ್ರಕಾರ ಆಗಲಿ" ಎಂದು ಹೇಳುವುದಲ್ಲ; ಬದಲಿಗೆ ಈ ಸಮರ್ಪಣೆಯನ್ನು ನಾವು ಪ್ರತಿದಿನ ನವೀಕರಿಸಬೇಕು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ನಿಮ್ಮ ಕುರಿತು ಕಾಳಜಿ ಇರಲಿ. ಅಂತೆಯೇ ನಿಮ್ಮಂತೆ ಇತರರ ಕುರಿತೂ ಸಹ ಕಾಳಜಿಯನ್ನು ವಹಿಸಿರಿ" ಎಂದು ಇಲ್ಲಿನ ಗುರುಗಳು ಹಾಗೂ ಧಾರ್ಮಿಕ ಸಹೋದರ-ಸಹೋದರಿಯೆರಿಗೆ ಪೋಪ್ ಫ್ರಾನ್ಸಿಸ್ ಕಿವಿಮಾತನ್ನು ಹೇಳಿದ್ದಾರೆ.  

15 December 2024, 15:45