ಹುಡುಕಿ

ಪೋಪ್ ಫ್ರಾನ್ಸಿಸ್: ಯುದ್ಧ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ

2024 ರ ಆಗಮನ ಕಾಲದ ತಮ್ಮ ಮೊದಲನೇ ಸಾರ್ವಜನಿಕ ಭೇಟಿಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ವಿಶ್ವದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ತಮ್ಮ ಮನವಿಯನ್ನು ನವೀಕರಿಸಿದ್ದಾರೆ. ಈ ವೇಳೆ ಅವರು "ಯುದ್ಧ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ" ಎಂದು ಹೇಳಿದ್ದಾರೆ.

ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್

2024 ರ ಆಗಮನ ಕಾಲದ ತಮ್ಮ ಮೊದಲನೇ ಸಾರ್ವಜನಿಕ ಭೇಟಿಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ವಿಶ್ವದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ತಮ್ಮ ಮನವಿಯನ್ನು ನವೀಕರಿಸಿದ್ದಾರೆ. ಈ ವೇಳೆ ಅವರು "ಯುದ್ಧ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ" ಎಂದು ಹೇಳಿದ್ದಾರೆ.

"ಯುದ್ಧ ಎಂಬುದು ಮಾನವರ ಸೋಲಾಗಿದ್ದು, ಅದು ಯಾವ ಸಮಸ್ಯೆಗಳನ್ನೂ ಬಗೆಹರಿಸುವುದಿಲ್ಲ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸರು "ರಕ್ತಸಾಕ್ಷಿಯಾಗಿರುಗುವ ಉಕ್ರೇನ್, ಪ್ಯಾಲೆಸ್ತೇನ್, ಮ್ಯಾನ್ಮಾರ್" ದೇಶಗಳಲ್ಲಿ ಶಾಂತಿ ನೆಲೆಸುವಂತೆ ವಿಶೇಷವಾಗಿ ಪ್ರಾರ್ಥಿಸಿದರು. ಈ ದೇಶಗಳಲ್ಲಿ ಯುದ್ಧದ ಕಾರಣದಿಂದಾಗಿ ಮಡಿದ ಮುಗ್ಧ ಮಕ್ಕಳಿಗಾಗಿ ಪೋಪ್ ಫ್ರಾನ್ಸಿಸ್ ಕಂಬನಿ ಮಿಡಿದರು.

ಶಾಂತಿಗಾಗಿ ತಮ್ಮ ಮನವಿಯನ್ನು ಮತ್ತೆ ನವೀಕರಿಸಿದ ಪೋಪ್ ಫ್ರಾನ್ಸಿಸ್ ಅವರು "ಈ ಜಗದಲ್ಲಿ ಮತ್ತೆ ಶಾಂತಿ ನೆಲೆಸಲಿ ಎಂದು ಎಲ್ಲರೂ ಪ್ರಾರ್ಥಿಸೋಣ" ಎಂದು ಹೇಳಿದರು.    

04 December 2024, 16:41