ಹುಡುಕಿ

ಪೋಪ್ ಫ್ರಾನ್ಸಿಸ್: ವದಂತಿಗಳು ಸುವಾರ್ತಾ ಪ್ರಸಾರ ಕಾರ್ಯಕ್ಕೆ ತೊಡಕಾಗುತ್ತವೆ

ಕಾರ್ಮೆಲೈಟ್ಸ್ ಸಿಸ್ಟರ್ಸ್ ಮೆಸೆಂಜರ್ಸ್ ಆಫ್ ದಿ ಹೋಲಿ ಸ್ಪಿರಿಟ್ ಸಭೆಯ ಭಗಿನಿಯರನ್ನು ಭೇಟಿ ಮಾಡಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು, ತಮ್ಮ ಸಂಪ್ರದಾಯದಂತೆ ಸುವಾರ್ತಾ ಪ್ರಸಾರ ಕಾರ್ಯದಲ್ಲಿ ಪ್ರಾರ್ಥನೆ ಹಾಗೂ ಭಕ್ತಿಯ ಮೂಲಕ ಪಾಲ್ಗೊಳ್ಳುವಂತೆ ಕನ್ಯಾಸ್ತ್ರೀಯರಿಗೆ ಕಿವಿಮಾತನ್ನು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಕಾರ್ಮೆಲೈಟ್ಸ್ ಸಿಸ್ಟರ್ಸ್ ಮೆಸೆಂಜರ್ಸ್ ಆಫ್ ದಿ ಹೋಲಿ ಸ್ಪಿರಿಟ್ ಸಭೆಯ ಭಗಿನಿಯರನ್ನು ಭೇಟಿ ಮಾಡಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು, ತಮ್ಮ ಸಂಪ್ರದಾಯದಂತೆ ಸುವಾರ್ತಾ ಪ್ರಸಾರ ಕಾರ್ಯದಲ್ಲಿ ಪ್ರಾರ್ಥನೆ ಹಾಗೂ ಭಕ್ತಿಯ ಮೂಲಕ ಪಾಲ್ಗೊಳ್ಳುವಂತೆ ಕನ್ಯಾಸ್ತ್ರೀಯರಿಗೆ ಕಿವಿಮಾತನ್ನು ಹೇಳಿದ್ದಾರೆ. 

"ಶುಭಸಂದೇಶವನ್ನು ಸಾರದಿದ್ದರೆ ನನಗೆ ಧಿಕ್ಕಾರವಿರಲಿ" ಎಂಬ ಸಂತ ಪೌಲರ ಮಾತುಗಳ ಪ್ರತಿಯೊಬ್ಬರ ಎದೆಗಳಲ್ಲೂ ಪ್ರತಿನಿಧಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಗಿನಿಯರಿಗೆ ಹೇಳಿದರು. ಬ್ರೆಝಿಲ್ ಹಾಗೂ ಯೂರೋಪ್ ಖಂಡದ ವಿವಿಧ ದೇಶಗಳಿಂದ ಪವಿತ್ರ ಯಾತ್ರೆಗೆಂದು ಆಗಮಿಸಿದ್ದ ಕನ್ಯಾಸ್ತ್ರೀಯರಿಗೆ ಈ ಮಾತನ್ನು ಹೇಳಿದ ಪೋಪ್ ಫ್ರಾನ್ಸಿಸ್ ಅವರು ಇನ್ನೇನು ಕೆಲವೇ ದಿನಗಳಲ್ಲಿ ಅವರು ತಮ್ಮ ನಡುವೆ ನೂತನ ನಾಯಕಿಯನ್ನು ಆರಿಸುವ ಹೊಸ್ತಿಲಲ್ಲಿರುವಾಗ, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದರು. 

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಧಾರ್ಮಿಕ ಬದುಕಿನಲ್ಲಾಗಲಿ ಅಥವಾ ಶ್ರೀಸಾಮಾನ್ಯ ಬದುಕಿನಲ್ಲಾಗಲಿ ವದಂತಿಗಳನ್ನು ಹರಡುವುದು ಸುವಾರ್ತಾ ಪ್ರಸಾರ ಕಾರ್ಯಕ್ಕೆ ವಿರುದ್ಧವಾಗಿದೆ. ಧಾರ್ಮಿಕ ವ್ಯಕ್ತಿಗಳಾದ ನಾವು ವದಂತಿಗಳನ್ನು ಹರಡಲೂ ಬಾರದು ಹಾಗೂ ಅವುಗಳಿಗೆ ಕಿವಿಗೊಡಲು ಬಾರದು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. "ಕಾರ್ಮೆಲೈಟ್ ಸಭೆಯವರಾಗಿ ಪ್ರಾರ್ಥನೆ ಹಾಗೂ ಶುಭಸಂದೇಶ ಪ್ರಸಾರ ಕಾರ್ಯವನ್ನು ಮಾಡುವುದಕ್ಕೆ ನೀವು ವಿಶೇಷ ಕರೆಯನ್ನು ಹೊಂದಿದ್ದೀರಿ" ಎಂದು ಹೇಳಿದರು.  

06 December 2024, 15:58