ಹುಡುಕಿ

IL PAPA A REBIBBIA, LA LAVANDA DEI PIEDI ALLE DETENUTE

ಕಾರಾಗೃಹದಲ್ಲಿ ಪವಿತ್ರ ದ್ವಾರವನ್ನು ತೆರೆಯಲಿರುವ ಪೋಪ್ ಫ್ರಾನ್ಸಿಸ್

ಜ್ಯೂಬಿಲಿ ಸಂಪ್ರದಾಯದಲ್ಲಿ ಪ್ರಪ್ರಥಮ ಬಾರಿಗೆ ಪೋಪ್ ಫ್ರಾನ್ಸಿಸ್ ಅವರು ಐದನೇಯ ಪವಿತ್ರ ದ್ವಾರವನ್ನು ರೋಮ್ ನಗರದ ಕಾರಾಗೃಹದಲ್ಲಿ ತೆರೆಯಲಿದ್ದಾರೆ. ಈ ಮೂಲಕ ಅವರು ಬಂಧಿಗಳ ಕುರಿತು ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಜ್ಯೂಬಿಲಿ ಸಂಪ್ರದಾಯದಲ್ಲಿ ಪ್ರಪ್ರಥಮ ಬಾರಿಗೆ ಪೋಪ್ ಫ್ರಾನ್ಸಿಸ್ ಅವರು ಐದನೇಯ ಪವಿತ್ರ ದ್ವಾರವನ್ನು ರೋಮ್ ನಗರದ ಕಾರಾಗೃಹದಲ್ಲಿ ತೆರೆಯಲಿದ್ದಾರೆ.  ಈ ಮೂಲಕ ಅವರು ಬಂಧಿಗಳ ಕುರಿತು ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ. 

ಸಂಪ್ರದಾಯದಂತೆ ಪೋಪ್ ಫ್ರಾನ್ಸಿಸ್ ಅವರು ಇಂದು ರಾತ್ರಿ ಜ್ಯೂಬಿಲಿ ದ್ವಾರಗಳನ್ನು ತೆರೆಯಲಿದ್ದಾರೆ. ರೋಮ್ ನಗರದ ನಾಲ್ಕೂ ಮಹಾದೇವಾಲಯಗಳ ಪವಿತ್ರ ದ್ವಾರಗಳು ಇಂದು ಪೋಪ್ ಫ್ರಾನ್ಸಿಸ್ ಅವರಿಂದ ತೆರೆಲ್ಪಡುತ್ತಿವೆ. ಈ ಮೂಲಕ ಪೋಪ್ ಫ್ರಾನ್ಸಿಸ್ ಅವರು 2025 ರ ಜ್ಯೂಬಿಲಿ ವರ್ಷವನ್ನು ಉದ್ಘಾಟಿಸಲಿದ್ದಾರೆ.

ಆದರೆ ಇದೇ ದಿನದಂದು ಹದಿನೈದನೇ ಶತಮಾನದಿಂದ ಆಚರಿಸಿಕೊಂಡು ಬಂದಿರುವ ಜ್ಯೂಬಿಲಿ ಸಂಪ್ರದಾಯಕ್ಕೆ ಹೊಸ ಸೇರ್ಪಡೆಯೊಂದು ಆಗಲಿದೆ. ಅದು ಪೋಪ್ ಫ‌್ರಾನ್ಸಿಸ್ ಅವರು ರೋಮ್ ನಗರದ ರಿಬೆಬ್ಬಿಯ ಕಾರಾಗೃಹದಲ್ಲಿ ಐದನೇ ಪವಿತ್ರ ದ್ವಾರವನ್ನು ತೆರೆಯಲಿದ್ದು, ಬಂಧಿತರೂ ಸಹ ಭವಿಷ್ಯದ ಕುರಿತು ಭರವಸೆಯನ್ನು ಹೊಂದ ಬಹುದು ಹಾಗೂ ಮನಪರಿವರ್ತಿತ ನಾಗರೀಕರಾಗಿ ಬಾಳಬಹುದು ಎಂಬ ಸಂದೇಶವನ್ನು ಇದು ನೀಡುತ್ತದೆ.

ಪೋಪ್ ಫ್ರಾನ್ಸಿಸ್ ಅವರು ಬಂಧಿತರಿಗೆ ಕಾಳಜಿಯನ್ನು ಮುಂಚಿನಿಂದಲೂ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಅವರ ಪೋಪಾಧಿಕಾರದ ಆರಂಭದಿಂದ ಇಲ್ಲಿಯವರೆಗೂ ಅವರು ಬಂಧಿತರ ಕುರಿತು ವಿಶೇಷ ಪ್ರೀತಿ ಹಾಗೂ ಕಾಳಜಿಯನ್ನು ಹೊಂದಿದ್ದು, ಅವರು ಪರಿವರ್ತನೆಗೊಂಡ ಮನುಷ್ಯರಾಗಿ ಸಮಾಜದಲ್ಲಿ ಜೀವಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಕಳೆದ ವಾರ ಪೋಪ್ ಫ್ರಾನ್ಸಿಸ್ ಅವರು ಮರಣದಂಡನೆ ಶಿಕ್ಷೆಯನ್ನು ಹೊಂದಿರುವ ಖೈದಿಗಳ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ವಿಶ್ವ ನಾಯಕರುಗಳಿಗೆ ಕರೆ ನೀಡಿದ್ದರು.  

24 December 2024, 16:54