ಪೋಪ್ ಫ್ರಾನ್ಸಿಸ್: ಅಮೇರಿಕಾದಲ್ಲಿನ ಮರಣ ದಂಡನೆ ಖೈದಿಗಳಿಗೆ ಕರುಣೆ ತೋರಿಸಲಿ

ಪೋಪ್ ಫ್ರಾನ್ಸಿಸ್ ಅವರು ಅಮೇರಿಕಾದಲ್ಲಿ ಮರಣ ದಂಡನೆಯ ತೀರ್ಪಿಗೆ ಒಳಗಾಗಿ ಸಾವನ್ನು ಎದುರುನೋಡುತ್ತಿರುವ ಖೈದಿಗಳ ಕುರಿತು ಮಾತನಾಡಿ, ಈ ಖೈದಿಗಳ ಮರಣ ದಂಡನೆ ತೀರ್ಪು ಬದಲಾಗಬೇಕು ಅಥವಾ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದು ಸಾಧ್ಯವಾಗಲಿ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಅಮೇರಿಕಾದಲ್ಲಿ ಮರಣ ದಂಡನೆಯ ತೀರ್ಪಿಗೆ ಒಳಗಾಗಿ ಸಾವನ್ನು ಎದುರುನೋಡುತ್ತಿರುವ ಖೈದಿಗಳ ಕುರಿತು ಮಾತನಾಡಿ, ಈ ಖೈದಿಗಳ ಮರಣ ದಂಡನೆ ತೀರ್ಪು ಬದಲಾಗಬೇಕು ಅಥವಾ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದು ಸಾಧ್ಯವಾಗಲಿ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದಿನ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಕುರಿತು ಮಾತನಾಡಿದ್ದು, ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮರಣ ದಂಡನೆಯ ತೀರ್ಪಿನಲ್ಲಿರುವ ಖೈದಿಗಳಿಗೆ ಕ್ಷಮಾದಾನವನ್ನು ಹಾಗೂ ಅವರ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಹಕ್ಕು ಇರುವ ಕಾರಣ, ಈ ಮಾತನ್ನು ಹೇಳಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಜನವರಿ ತಿಂಗಳಲ್ಲಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿದ್ದಾರೆ.

"ಅಮೇರಿಕಾದಲ್ಲಿ ಮರಣ ದಂಡನೆಯ ಶಿಕ್ಷೆಯನ್ನು ಅನುಭವಿಸುತ್ತಿರುವ ಎಲ್ಲಾ ಖೈದಿಗಳಿಗಾಗಿ ಪ್ರಾರ್ಥಿಸಬೇಕು ಎಂದು ನಾನು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಅವರ ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿ ಅಥವಾ ಬದಲಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. "ಈ ನಮ್ಮ ಸಹೋದರ ಸಹೋದರಿಯರನ್ನು ದಯಾಳು ಪ್ರಭುವು ಕಾಪಾಡಲಿ. ಅವರಿಗೆ ರಕ್ಷಣೆಯನ್ನು ದಯಪಾಲಿಸಲಿ" ಎಂದು ನಾವೆಲ್ಲರೂ ಭಕ್ತಿಯಿಂದ ಪ್ರಾರ್ಥಿಸೋಣ ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಹೇಳಿದರು.

08 December 2024, 16:07