ಪ್ರಪ್ರಥಮ ಬಾರಿಗೆ ಕಾರಾಗೃಹದಲ್ಲಿ ಪವಿತ್ರ ದ್ವಾರವನ್ನು ತೆರೆದ ಪೋಪ್ ಫ್ರಾನ್ಸಿಸ್
ವರದಿ: ಕೀಲ್ಚೆ ಗುಸ್ಸೀ
ಡಿಸೆಂಬರ್ 24 ರ ಕ್ರಿಸ್ಮಸ್ ಜಾಗರಣೆಯ ಬಲಿಪೂಜೆಯಲ್ಲಿ ಸಂತ ಪೇತ್ರರ ಮಹಾದೇವಾಲಯದ ದ್ವಾರವನ್ನು ತೆರೆಯುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಅಧಿಕೃತವಾಗಿ ಜ್ಯೂಬಿಲಿ ವರ್ಷಕ್ಕೆ ಚಾಲನೆಯನ್ನು ನೀಡಿದ್ದಾರೆ. ಇದೀಗ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ರಿಬೇಬಿಯಾ ಕಾರಾಗೃಹಕ್ಕೆ ತೆರಳಿ, ಅಲ್ಲಿ ಪವಿತ್ರ ದ್ವಾರವನ್ನು ತೆರೆದಿದ್ದಾರೆ. ಆ ಮೂಲಕ ಬಂಧಿತರ ಕುರಿತು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಅವರಿಗೂ ಸಹ ಭರವಸೆ ಇದೆ ಎಂಬ ಸಂದೇಶವನ್ನು ಅವರು ಕಳುಹಿಸಿದ್ದಾರೆ.
"ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರವನ್ನು ತೆರೆದ ನಂತರ ಎರಡನೇ ದ್ವಾರವನ್ನು ನಾನು ಕಾರಾಗೃಹದಲ್ಲಿ ತೆರೆಯಬೇಕು ಎಂದು ಚಿಂತಿಸಿದ್ದೆ" ಎಂದು ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ರಿಬೆಬ್ಬಿಯ ಕಾಂಪ್ಲೆಕ್ಸ್ ಕಾರಾಗೃಹದಲ್ಲಿ ಹೇಳಿದ್ದಾರೆ. ಎಲ್ಲರ ಹೃದಯಗಳೂ ಈ ಸಂದರ್ಭದಲ್ಲಿ ತೆರೆಯಬೇಕು ಏಕೆಂದರೆ ನಮಗೆಲ್ಲರಿಗೂ ಭರವಸೆ ಇದೆ ಎಂಬುದು ನಮಗೆ ಅರ್ಥವಾಗಬೇಕು" ಎಂದು ಅವರು ಹೇಳಿದ್ದಾರೆ.
ಕಾರಾಗೃಹದಲ್ಲಿ ಪೋಪ್ ಫ್ರಾನ್ಸಿಸ್ ಅವರು ಪವಿತ್ರ ದ್ವಾರವನ್ನು ತೆರೆದ ನಂತರ ದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಎಲ್ಲರ ಹೃದಯಗಳನ್ನು ತೆರೆಯಲು ಇದೊಂದು ಅವಕಾಶವಾಗಿದೆ. ಭರವಸೆ ಎಂಬುದು ನಮ್ಮೆಲ್ಲರ ಬದುಕಿನಲ್ಲಿ ದೇವರು ಮಹತ್ಕಾರ್ಯಗಳನ್ನು ಮಾಡಲಿದ್ದಾರೆ.
"ನಮ್ಮ ಬದುಕಿನಲ್ಲಿ ಏನೇ ಆಗಲಿ. ನಾವು ಭರವಸೆಯ ಹಗ್ಗವನ್ನು ಹಿಡಿಯಬೇಕು. ಕೆಲವೊಮ್ಮೆ ಭರವಸೆಯ ಹಗ್ಗವನ್ನು ಹಿಡಿದು ನಮ್ಮ ಕೈಗಳು ಗಾಯಗೊಳ್ಳಬಹುದು. ಆದರೂ ಸಹ ನಾವು ಎಡೆಬಿಡದೆ ಭರವಸೆಯನ್ನು ಕಾಪಿಟ್ಟುಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಕಾರಾಗೃಹದಲ್ಲಿ ಪವಿತ್ರ ದ್ವಾರಗಳನ್ನು ತೆರೆಯುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಬಂಧಿತ ಕುರಿತ ತಮ್ಮ ಪ್ರೀತಿ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ವಿಶ್ವದಲ್ಲಿ ಮರಣ ದಂಡನೆ ಶಿಕ್ಷೆ ನಿಲ್ಲಬೇಕು ಎಂದು ಸದಾ ಪ್ರತಿಪಾದಿಸುತ್ತಾರೆ. ಈಗಾಗಲೇ ಮರಣ ದಂಡನೆ ಶಿಕ್ಷೆಯನ್ನು ಹೊಂದಿರುವ ಖೈದಿಗಳಿಗೆ ಆ ಶಿಕ್ಷೆಯನ್ನು ಕಡಿತಗೊಳಿಸಬೇಕೆಂದು ವಿಶ್ವದ ನಾಯಕರುಗಳಿಗೆ ಮನವಿ ಮಾಡಿಕೊಂಡಿದ್ದಾರೆ.