ಹುಡುಕಿ

ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್   (AFP or licensors)

ಜಿಮ್ಮಿ ಕಾರ್ಟರ್ ನಿಧನಕ್ಕೆ ಸಂತಾಪ ಸೂಚಿಸಿದ ಪೋಪ್ ಫ್ರಾನ್ಸಿಸ್

ಜನಾಂಗಳ ನಡುವೆ ಶಾಂತಿ ಮತ್ತು ಸಂಧಾನ ಏರ್ಪಡಿಸುವಲ್ಲಿ, ಬಡವರಿಗೆ ನೆರವಾಗಿ, ಸದಾ ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿ ಕ್ರಿಸ್ತೀಯ ವಿಶ್ವಾಸ ಹಾಗೂ ಬದ್ಧತೆಯನ್ನು ತೋರುತ್ತಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ನಿಧನಕ್ಕೆ ಪೋಪ್ ಫ್ರಾನ್ಸಿಸ್ ಅವರು ಕಂಬನಿಯನ್ನು ಮಿಡಿದಿದ್ದಾರೆ.

ವರದಿ: ಕ್ರಿಸ್ಟೋಫರ್ ವೆಲ್ಸ್

ಜನಾಂಗಳ ನಡುವೆ ಶಾಂತಿ ಮತ್ತು ಸಂಧಾನ ಏರ್ಪಡಿಸುವಲ್ಲಿ, ಬಡವರಿಗೆ ನೆರವಾಗಿ, ಸದಾ ಮಾನವ ಹಕ್ಕುಗಳ ಪ್ರತಿಪಾದನೆಯಲ್ಲಿ ಕ್ರಿಸ್ತೀಯ ವಿಶ್ವಾಸ ಹಾಗೂ ಬದ್ಧತೆಯನ್ನು ತೋರುತ್ತಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ನಿಧನಕ್ಕೆ ಪೋಪ್ ಫ್ರಾನ್ಸಿಸ್ ಅವರು ಕಂಬನಿಯನ್ನು ಮಿಡಿದಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಜಿಮ್ಮಿ ಕಾರ್ಟರ್ ಅವರ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಿ, ಟೆಲಿಗ್ರಾಂ ಸಂದೇಶವನ್ನು ಕಳುಹಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಸಹಿ ಹಾಕಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ತಮ್ಮ ಟೆಲಿಗ್ರಾಂ ಸಂದೇಶದಲ್ಲಿ ಜಿಮ್ಮಿ ಕಾರ್ಟರ್ ಅವರ ಜೀವನದ ಕುರಿತು ಮಾತನಾಡಿದ್ದು, ಹೇಗೆ ಅವರು ಬಡತನದಿಂದ ಅಮೇರಿಕಾ ಅಧ್ಯಕ್ಷ ಪದವಿಗೇರಿದರು ಎಂಬ ಕುರಿತು ನೆನಪಿಸಿಕೊಂಡರು. ಜಿಮ್ಮಿ ಕಾರ್ಟರ್ ತಮ್ಮ ಬದುಕಿನುದ್ದಕ್ಕೂ ಬಡವರ, ಶೋಷಿತರ ಹಾಗೂ ದಮನಿತರ ಪರವಾಗಿದ್ದರು. ಜನಾಂಗಗಳ ನಡುವೆ ಸಾಮರಸ್ಯ ಹಾಗೂ ಸಂಧಾನವನ್ನು ಬಿತ್ತುವ ಶಾಂತಿದೂತನಂತಿದ್ದರು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

1979 ರಲ್ಲಿ ಕಾರ್ಟರ್ ಅವರು ಅಮೇರಿಕಾದ ಅಧ್ಯಕ್ಷರಾದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ಶ್ವೇತ ಭವನಕ್ಕೆ ಪೋಪ್ ಅವರನ್ನು ಆಹ್ವಾನಿಸಿದ ಪ್ರಥಮ ಅಧ್ಯಕ್ಷರಾದರು. ಅವರು ಅಂದು ಪೋಪ್ ಸಂತ ದ್ವೀತಿಯ ಜಾನ್ ಪೌಲರನ್ನು ಶ್ವೇತ ಭವನಕ್ಕೆ ಆಹ್ವಾನಿಸಿದ್ದರು.

ಜಿಮ್ಮಿ ಕಾರ್ಟರ್ ಅವರು ಸೇವೆಯ ನಾಯಕತ್ವದ ಮಾದರಿಯಾಗಿದ್ದು, ಅವರು ಕೇವಲ ಹೋರಾಟಗಾರ ಅಥವಾ ಮಾನವೀಯ ವ್ಯಕ್ತಿಯಲ್ಲದೆ ಅಪ್ರತಿಮ ನಾಯಕ ಹಾಗೂ ದೂರದೃಷ್ಟಿತ್ವದ ಅಧ್ಯಕ್ಷರಾಗಿದ್ದರು. ಜಿಮ್ಮಿ ಕಾರ್ಟರ್ ಹಾಗೂ ಅವರು ಪತ್ನಿ ರೊಸಲೀನ್ ಅವರು ಕ್ರೈಸ್ತ ವಿಶ್ವಾಸದ ಮಾದರಿಯಾಗಿ ಜೀವಿಸಿದರು ಎಂದು ಅಂಟ್ಲಾಂಟಾದ ಮಹಾಧರ್ಮಾಧ್ಯಕ್ಷ ಗ್ರೆಗರಿ ಜಾನ್ ಹಾರ್ಟ್ಮೆಯರ್, ಓ.ಎಫ್.ಎಂ. ಕನ್ವೆಂಚುವಲ್, ಅವರು ಹೇಳಿದ್ದಾರೆ ಎಂದು ವ್ಯಾಟಿಕನ್ ನ್ಯೂಸ್ ವರದಿ ಮಾಡಿದೆ.

ಜಿಮ್ಮಿ ಕಾರ್ಟರ್ ಅವರಿಗೆ 100 ವರ್ಷ ವಯಸ್ಸಾಗಿತ್ತು.  

ಅಮೇರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯ ಮೂಲಕ ಬೀಳ್ಕೊಡಲಾಗುವುದು.

30 December 2024, 16:53