ಪತ್ರಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ ಪೋಪ್ ಫ್ರಾನ್ಸಿಸ್
ವರದಿ: ಸಾಲ್ವತೋರೆ ಚೆರ್ನೂಝಿಯೋ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಕಾಸಿಕಾ ದ್ವೀಪಕ್ಕೆ ಪ್ರೇಷಿತ ಭೇಟಿಯನ್ನು ನೀಡಿ ಹಿಂತಿರುಗಿದ ಪೋಪ್ ಫ್ರಾನ್ಸಿಸ್ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮೆಲ್ಲಾ ಕಾರ್ಯಗಳಿಗೆ ಪೋಪ್ ಫ್ರಾನ್ಸಿಸ್ ಅವರು ಪತ್ರಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಅಜಾಕ್ಸಿಯೋ ನಗರದಿಂದ ರೋಮ್ ನಗರಕ್ಕೆ ಹಿಂತಿರುಗುವ ವೇಳೆ ವಿಮಾನದಲ್ಲಿ ಸುಮಾರು 69 ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರೇಷಿತ ಭೇಟಿಯ ಕುರಿತು ಮಾತನಾಡಿದ್ದಾರೆ.
"ನಿಮ್ಮೆಲ್ಲಾ ಕಾರ್ಯಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ನೀವು ಇಲ್ಲಿ ಒಂದು ವಿಷಯ ಗಮನಿಸಿದ್ದೀರಾ? ಈ ಪ್ರದೇಶದಲ್ಲಿ ಅನೇಕ ಮಕ್ಕಳಿದ್ದಾರೆ. ಇಲ್ಲಿ ಹಾಗೂ ಟಿಮೊರ್ ಲೆಸ್ತೆ ದೇಶದಲ್ಲಿ ನಾನು ಹೆಚ್ಚು ಮಕ್ಕಳನ್ನು ನೋಡಿದ್ದೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಪತ್ರಕರ್ತರಿಗೆ ಹೇಳಿದರು.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರ ಜೊತೆ ಪ್ರಯಾಣಿಸುತ್ತಿದ್ದ ಪತ್ರಕರ್ತರೆಲ್ಲರೂ ಸೇರಿ, ರೋಮ್ ನಗರದ ಬೇಕರಿಯೊಂದು ಪೋಪ್ ಫ್ರಾನ್ಸಿಸ್ ಅವರ ಹುಟ್ಟಿದ ಹಬ್ಬಕ್ಕಾಗಿ ನೀಡಿದ ಕೇಕ್ ಅನ್ನು ನೀಡಿದ್ದರು. ಈ ಕೇಕನ್ನು ಪತ್ರಕರ್ತರು ಪೋಪ್ ಫ್ರಾನ್ಸಿಸ್ ಅವರಿಗೆ ನೀಡಿ, ಅವರಿಗೆ ಮುಂಚಿತವಾಗಿ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರಿದರು.