ಹುಡುಕಿ

ಪೋಪ್ ಫ್ರಾನ್ಸಿಸ್: ಸಂತೋಷದ ಹೃದಯದಿಂದ ಬಡವರಿಗೆ ನೆರವಾಗಿರಿ

ಅಮೇರಿಕಾದಲ್ಲಿ ನೆಲೆಸಿರುವ ಹಾಗೂ ಪೊಂಟಿಫಿಕಲ್ ಮಿಷನರಿ ಸೇವಾಕಾರ್ಯಗಳಿಗೆ ನೆರವಾಗುವ ವಿಯೆಟ್ನಮೀಸ್ ಕಥೋಲಿಕ ದಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತೋಷದ ಹೃದಯದಿಂದ ಬಡವರಿಗೆ ನೆರವಾಗಿರಿ" ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಅಮೇರಿಕಾದಲ್ಲಿ ನೆಲೆಸಿರುವ ಹಾಗೂ ಪೊಂಟಿಫಿಕಲ್ ಮಿಷನರಿ ಸೇವಾಕಾರ್ಯಗಳಿಗೆ ನೆರವಾಗುವ ವಿಯೆಟ್ನಮೀಸ್ ಕಥೋಲಿಕ ದಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತೋಷದ ಹೃದಯದಿಂದ ಬಡವರಿಗೆ ನೆರವಾಗಿರಿ" ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಯೇಸುಕ್ರಿಸ್ತರನ್ನು ಎಲ್ಲೆಡೆ ಸಾರುವ ಅಗತ್ಯತೆ ಹಾಗೂ ಅನಿವಾರ್ಯತೆಯ ಕುರಿತು ಮಾತನಾಡಿದರು. ಭರವಸೆ ಹಾಗೂ ಶಾಂತಿಯ ಕುರಿತು ಮಾತನಾಡಿದ ಅವರು "ಜ್ಯೂಬಿಲಿ ವರ್ಷದಲ್ಲಿ ಭರವಸೆ ನಮ್ಮ ಬದುಕಾಗಲಿ. ಭರವಸೆಯಾಗಿರುವ ಕ್ರಿಸ್ತರು ನಮ್ಮ ಬೆಳಕಾಗಲಿ" ಎಂದು ಹೇಳಿದರು. ಯೇಸುಕ್ರಿಸ್ತರನ್ನು ಎಲ್ಲಾ ಕಡೆ, ಎಲ್ಲಾ ಸಮಯದಲ್ಲಿಯೂ ಹಾಗೂ ಎಲ್ಲಾ ರೀತಿಯಲ್ಲಿಯೂ ಸಾರಬೇಕೆಂದು ಅವರು ನೆನಪಿಸಿದರು.

ಧರ್ಮಸಭೆಯ ಸೇವಾಕಾರ್ಯಗಳನ್ನು ವಿಶ್ವದ ಎಲ್ಲೆಡೆ ಬೆಂಬಲಿಸಲು ಈ ದಾನಿಗಳು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್ ಅವರು "ನಾವು ಕೊಡುವುದನ್ನು ಉದಾರವಾಗಿ ಹಾಗೂ ಸಂತೋಷದಿಂದ ನೀಡಬೇಕು" ಎಂದು ಹೇಳಿದ್ದಾರೆ.   

ಅಂತಿಮವಾಗಿ, ಪೋಪ್ ಅಮೇರಿಕಾಕ್ಕೆ ವಲಸೆ ಬಂದ ಅನೇಕ ವಿಯೆಟ್ನಾಂ ಕಥೋಲಿಕರ "ಸ್ಥಿರ ನಂಬಿಕೆ" ಯನ್ನು ಶ್ಲಾಘಿಸಿದರು. ಅವರು ಇದನ್ನು "ಸ್ಫೂರ್ತಿಯ ಅಮೂಲ್ಯ ಮೂಲ" ಎಂದು ವಿವರಿಸಿದರು. ತಮ್ಮ ಪೂರ್ವಜರ ತಾಯ್ನಾಡಿನಿಂದ ದೂರವಿರುವ "ಕ್ರಿಶ್ಚಿಯನ್ ಸಮುದಾಯಗಳನ್ನು ಬೆಂಬಲಿಸುವ" ಅವರ ಬಯಕೆಗೆ ಬೆಂಬಲವನ್ನು ನೀಡಿದರು ಎಂದು ವರದಿಯಾಗಿದೆ.

19 December 2024, 17:23