ಹುಡುಕಿ

ಜ್ಯೂಬಿಲಿ ವರದಾನದ ಸಮಯವಾಗಿದೆ: ಪೋಪ್ ಫ್ರಾನ್ಸಿಸ್

ಇಟಲಿಯ ಪತ್ರಕರ್ತರಾಗಿದ್ದು, ವಿಶೇಷವಾಗಿ ವ್ಯಾಟಿಕನ್ ನಗರದ ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತ ಫ್ರಾನ್ಸಿಸ್ಕೋ ಅಂತೋನಿಯೋ ಗ್ರಾನ ಅವರು ಇತ್ತೀಚೆಗಷ್ಟೇ "ಭರವಸೆಯ ಜ್ಯೂಬಿಲಿ" ಎಂಬ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿರು ಪೋಪ್ ಫ್ರಾನ್ಸಿಸ್ ಅವರು, ತಮ್ಮ ಮುನ್ನುಡಿಯಲ್ಲಿ "ಎಲ್ಲಾ ಯುದ್ಧಗಳಿಗೂ ಜ್ಯೂಬಿಲಿ ವರ್ಷವು ಕದನ ವಿರಾಮ ಮೂಡಿಸುವಂತಾಗಲಿ" ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ನಾವು ಆಚರಿಸಲಿರುವ ಜ್ಯೂಬಿಲಿ ವರ್ಷದಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ಎಲ್ಲಾ ಯುದ್ಧಗಳು ನಿಂತು, ಕದನ ವಿರಾಮ ಏರ್ಪಡಲಿ. ಏಕೆಂದರೆ ಯುದ್ಧ ಎಂಬುದು ಯಾರ ಗೆಲುವೂ ಅಲ್ಲ. ಇದು ಎಲ್ಲರ ಸೋಲಾಗಿದೆ." ಎಂದು ಪೋಪ್ ಫ್ರಾನ್ಸಿಸ್ ಈ ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಲ್ಲಿ ಎಂದಿನಂತೆ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಕುರಿತು ಮಾತನಾಡಿದ್ದಾರೆ.

"ಭರವಸೆ ಎಂಬುದು ಭವಿಷ್ಯದ ಕುರಿತು ನಾವು ಹೊಂದುವ ಸಕಾರಾತ್ಮಕ ಭಾವನೆಯಲ್ಲ. ಭರವಸೆ ಎಂಬುದು ಆಗೇ ಆಗುತ್ತದೆ ಎಂಬ ವಿಶ್ವಾಸವನ್ನು ಹೊಂದುವುದಾಗಿದೆ. ಭರವಸೆ ಬದುಕಿನ ರೀತಿಯಾಗಿದ್ದು, ಉತ್ತಮ ಮೌಲ್ಯವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ವಲಸಿಗರ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಜ್ಯೂಬಿಲಿಯ ಈ ಪವಿತ್ರ ವರ್ಷದಲ್ಲಿ ನಾವು ನಮ್ಮ ವಲಸಿಗ ಸಹೋದರ-ಸಹೋದರಿಯರ ಕುರಿತೂ ಸಹ ಕಾಳಜಿಯನ್ನು ವ್ಯಕ್ತಪಡಿಸಬೇಕು. ಜ್ಯೂಬಿಲಿ ವರ್ಷದಲ್ಲಿ ಸಂತ ಪೇತ್ರರ ಮಹಾದೇವಾಲಯ ಸೇರಿದಂತೆ, ಇನ್ನಿತರೆ ಮೂರು ಮಹಾ ದೇವಾಲಯಗಳ ದ್ವಾರಗಳು ತೆರೆಯಲ್ಪಡುವಾಗ ಸಾವಿರಾರು ಜನರು ಇವುಗಳ ಮೂಲಕ ಹಾದುಹೋಗುತ್ತಾರೆ. ಜ್ಯೂಬಿಲಿ ಎಂಬುದು ಯಾವುದೋ ಒಂದು ಪ್ರವಾಸಿ ಕಾರ್ಯಕ್ರಮವಲ್ಲ. ಬದಲಿಗೆ, ಇದು ನಮ್ಮದೇ ವಿಶ್ವಾಸದ ಪಯಣವಾಗಿದೆ. ವಲಸಿಗರಿಗೆ ಇದು ಬದುಕಿನ ಘನತೆಯನ್ನು ಕೊಡುವಂಥದ್ದಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಮುನ್ನುಡಿಯಲ್ಲಿ ಹೇಳಿದ್ದಾರೆ.

ಅಂತಿಮವಾಗಿ, ಪೋಪ್ ಫ್ರಾನ್ಸಿಸ್ ಅವರು "ಜ್ಯೂಬಿಲಿ ವರ್ಷವು ಲಕ್ಷಾಂತರ ಜನರ ಮನಪರಿವರ್ತನೆಗೆ ಕಾರಣವಾಗಲಿ" ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಜ್ಯೂಬಿಲಿ ದೇವರ ಅನುಗ್ರಹದ ಸಂದರ್ಭವಾಗಿದೆ ಎಂದು ಹೇಳಿದ್ದಾರೆ.    

18 December 2024, 17:10