ಹುಡುಕಿ

ಸಿಸಿಲಿಯ ದೈವಶಾಸ್ತ್ರ ಸಂಸ್ಥೆಗೆ ಪೋಪ್ ಫ್ರಾನ್ಸಿಸ್: ಭರವಸೆಯ ಸುವಾರ್ತಾ ಪ್ರಸಾರಕರಾಗಿರಿ

ಸಿಸಿಲಿಯಾದ ಕಟಾನಿಯಾ ಪ್ರದೇಶದಲ್ಲಿರುವ ಸಂತ ಪೌಲರ ದೈವಶಾಸ್ತ್ರ ಸಂಸ್ಥೆಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಆ ಪ್ರದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಸವಾಲುಗಳ ಹಿನ್ನೆಲೆಯಲ್ಲಿ ಅವರಿಗೆ ಭರವಸೆಯ ಸುವಾರ್ತಾ ಪ್ರಸಾರಕಾಗಿರುವಂತೆ ಕರೆ ನೀಡಿದರು.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಸಿಸಿಲಿಯಾದ ಕಟಾನಿಯಾ ಪ್ರದೇಶದಲ್ಲಿರುವ ಸಂತ ಪೌಲರ ದೈವಶಾಸ್ತ್ರ ಸಂಸ್ಥೆಯ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಆ ಪ್ರದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಸವಾಲುಗಳ ಹಿನ್ನೆಲೆಯಲ್ಲಿ ಅವರಿಗೆ ಭರವಸೆಯ ಸುವಾರ್ತಾ ಪ್ರಸಾರಕಾಗಿರುವಂತೆ ಕರೆ ನೀಡಿದರು.

"ನೀವೆಲ್ಲರೂ ಜೊತೆಯಾಗಿ ನಡೆಯಬೇಕು. ನಿಮ್ಮ ವಿದ್ಯಾರ್ಥಿಗಳಿಗೆ ಸಮಾಜವನ್ನು ಅರ್ಥಮಾಡಿಕೊಳ್ಳುವಂತ ಧಾರ್ಮಿಕ ಶಿಕ್ಷಣವನ್ನು ನೀಡಬೇಕು. ಏಕೆಂದರೆ ಸಿಸಿಲಿ ಪ್ರಾಂತ್ಯಕ್ಕೆ ಭವಿಷ್ಯವನ್ನು ಭರವಸೆಯಿಂದ ನೋಡುವ ಪುರುಷ ಹಾಗೂ ಸ್ತ್ರೀಯರ ಅಗತ್ಯವಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಸಂತ ಪೌಲರ ಸಮುದಾಯದ ಸದಸ್ಯರಿಗೆ ಹೇಳಿದರು.

1969 ರಲ್ಲಿ ದ್ವಿತೀಯ ವ್ಯಾಟಿಕನ್ ಸಮ್ಮೇಳನದ ನಂತರ ಈ ದೈವಶಾಸ್ತ್ರ ಸಂಸ್ಥೆಯನ್ನು ಆರಂಭಿಸಲಾಯಿತು. ಆಗ ಪೂರ್ವ ಇಟಲಿಯ ಧರ್ಮಕ್ಷೇತ್ರಗಳು ಒಂದಾಗಿ, ಸಿಸಿಲಿಯ ಧಾರ್ಮಿಕ ಹಾಗೂ ಶ್ರೀಸಾಮಾನ್ಯರ ದೈವಶಾಸ್ತ್ರ ಶಿಕ್ಷಣಕ್ಕಾಗಿ ಈ ಸಂಸ್ಥೆಯನ್ನು ಜಂಟಿಯಾಗಿ ಸ್ಥಾಪಿಸಿದವು. ಈ ಸಂಸ್ಥೆಯು ಸಿಸಿಲಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸ್ಥರಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಸಂತ ಅಗಥಾ ಹಾಗೂ ಸಂತ ಲೂಸಿ ಅವರು ಈ ಪ್ರಾಂತ್ಯದಲ್ಲಿ ಜೀವಿಸಿರುವ ಸಂತರಾಗಿದ್ದು, ಈ ಪ್ರಾಂತ್ಯಕ್ಕೆ ಸಾಂಸ್ಕೃತಿಕ ಮಹತ್ವವಿದೆ. ಭರವಸೆಯಿಂದ ಭವಿಷ್ಯವನ್ನು ಮುನ್ನೋಡುವ ಪುರುಷ ಹಾಗೂ ಸ್ತ್ರೀಯರ ಅಗತ್ಯ ಸಿಸಿಲಿ ಪ್ರಾಂತ್ಯಕ್ಕಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಅಂತಿಮವಾಗಿ ಸಂತ ನಿಕೋಲಸ್ ಅವರ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂತ ನಿಕೋಲಸ್ ಅವರು ಪೂರ್ವ ಹಾಗೂ ಪಶ್ಚಿಮವನ್ನು ಬೆಸೆಯುವವರಾಗಿದ್ದು, ಶಾಂತಿ ಹಾಗೂ ಐಕಮತ್ಯಕ್ಕಾಗಿ ಅವರ ಮಧ್ಯಸ್ಥಿಕೆಯನ್ನು ಬೇಡೋಣ" ಎಂದು ಹೇಳಿದರು.       

06 December 2024, 16:17