ಲೆಬನನ್ ಪ್ರಧಾನಮಂತ್ರಿ ನಜೀಬ್ ಮಿಕಾಟಿ ಅವರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಲೆಬಾನನ್ ದೇಶದ ಮಧ್ಯಂತರ ಸರ್ಕಾರದಲ್ಲಿ ಪ್ರಧಾನಮಂತ್ರಿ ಆಗಿರುವ ನಜೀಬ್ ಮಿಕಾಟಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಶುಕ್ರವಾರ ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿರುವ ವ್ಯಾಟಿಕನ್ ಮಾಧ್ಯಮ ಪೀಠವು ಪ್ರಧಾನಿ ನಜೀಬ್ ಮಿಕಾಟಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ನೀಡಿದ ನಂತರ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದ್ದಾರೆ. ತಂದನಂತರ, ಅವರು ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಗಳಲ್ಲಿ ಉಭಯ ಪಕ್ಷಗಳು ಎರಡೂ ದೇಶಗಳ ನಡುವೆ ಇರುವ ರಾಜತಾಂತ್ರಿಕ ಸೌಹಾರ್ಧ ಸಂಬಂಧವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಲಾಯಿತು. ಮುಂದುವರೆದು, ಪ್ರಸ್ತುತ ಯುದ್ಧದ ಕುರಿತೂ ಸಹ ಚರ್ಚಿಸಲಾಗಿ ಶೀಘ್ರವೇ ಕದನ ವಿರಾಮ ಘೋಷಿಸುವಂತೆ ಒತ್ತಡವನ್ನು ಹೇರಬೇಕು ಎಂದು ಪ್ರಧಾನಿ ಮನವಿ ಮಾಡಿದರು.
ಚರ್ಚೆಯ ಅಂತ್ಯದಲ್ಲಿ ಸಂಪ್ರದಾಯದಂತೆ ಪೋಪ್ ಫ್ರಾನ್ಸಿಸ್ ಅವರು ಪವಿತ್ರ ಪೀಠದಿಂದ ವತಿಯಿಂದ ಲೆಬಾನನ್ ಪ್ರಧಾನಿ ಅವರಿಗೆ ಉಡುಗೊರೆಗಳನ್ನು ನೀಡಿದರು. ಅಂತೆಯೇ ಲೆಬಾನನ್ ಪ್ರಧಾನಿ ನಜೀಬ್ ಮಿಕಾಟಿ ಅವರೂ ಸಹ ಪೋಪ್ ಫ್ರಾನ್ಸಿಸ್ ಅವರಿಗೆ ಉಡುಗೊರೆಯನ್ನು ನೀಡಿದರು.