ಪ್ಯಾಲೆಸ್ತೀನ್ ಅಧ್ಯಕ್ಷ ಮಮೂದ್ ಅಬ್ಬಾಸ್ ಅವರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪ್ಯಾಲೆಸ್ತೀನ್ ಅಧ್ಯಕ್ಷ ಮಮೂದ್ ಅಬ್ಬಾಸ್ ಅವರು ವ್ಯಾಟಿಕನ್ ನಗರಕ್ಕೆ ಭೇಟಿ ನೀಡಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಗಾಝಾ ಪ್ರದೇಶಲ್ಲಿ ಕದನ ವಿರಾಮದ ಅವಶ್ಯಕತೆ, ಈ ಪ್ರದೇಶದಲ್ಲಿ ಕಥೋಲಿಕ ಧರ್ಮಸಭೆಯ ಪಾತ್ರದ ಕುರಿತಂತೆ ಮಾತನಾಡಿದ್ದು, ಮತ್ತೆ ಭಕ್ತಾಧಿಗಳು ಪವಿತ್ರ ನಾಡಿಗೆ ಆಗಮಿಸಲು ಆಗುವಂತೆ ಅಂತರಾಷ್ಟ್ರೀಯ ಸಮುದಾಯದ ಮೇಲೆ ಒತ್ತಡ ಹೇರುವಂತೆ ಪೋಪ್ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಮೂವತ್ತು ನಿಮಿಷಗಳ ಕಾಲ ಪ್ಯಾಲೆಸ್ತೀನ್ ಅಧ್ಯಕ್ಷರೊಂದಿಗೆ ಇಂದು ಬೆಳಿಗ್ಗೆ ಮಾತುಕತೆಯನ್ನು ನಡೆಸಿದರು. ತದನಂತರ ಪ್ಯಾಲೆಸ್ತೀನ್ ದೇಶದ ಅಧ್ಯಕ್ಷರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಇವರು ವ್ಯಾಟಿಕನ್ನಿನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಸಹ ಭೇಟಿ ಮಾಡಿದರು.

ಈ ವೇಳೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು. ಕಥೋಲಿಕ ಧರ್ಮಸಭೆ ಪ್ಯಾಲೆಸ್ತೇನ್ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ಕದನ ವಿರಾಮಕ್ಕೋಸ್ಕರ ಮಾಡುತ್ತಿರುವ ಪ್ರಯತ್ನಗಳ ಕುರಿತು ಸಂವಾದ ನಡೆಯಿತು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಸಂವಾದ ಹಾಗೂ ರಾಜತಾಂತ್ರಿಕ ಚರ್ಚೆಗಳೇ ಅತ್ಯುತ್ತಮ ಮಾರ್ಗವಾಗಿವೆ. ಯಾವುದೇ ಸಮಸ್ಯೆಗಳ ಬಗೆಹರಿಸಲು ಯುದ್ಧ ಅಥವಾ ಹಿಂಸೆ ಎಂಬುದು ಪರಿಹಾರವಲ್ಲ ಎಂಬ ಕುರಿತು ಮಾತುಕತೆಗಳು ನಡೆದವು ಎಂದು ವ್ಯಾಟಿಕನ್ ಮಾಧ್ಯಮ ಪ್ರಕಟಣೆಯು ತಿಳಿಸಿದೆ.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಹಾಗೂ ಪ್ಯಾಲೆಸ್ತೀನ್ ಅಧ್ಯಕ್ಷ ಮಮೂದ್ ಅಬ್ಬಾಸ್ ಅವರು ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.   

12 December 2024, 15:05