ಪೋಪ್ ಫ್ರಾನ್ಸಿಸ್: ಪವಿತ್ರ ಯಾತ್ರೆಗೆ ಮೌನ, ಶುಭಸಂದೇಶದ ಅಗತ್ಯವಿದೆ
ವರದಿ: ವ್ಯಾಟಿಕನ್ ನ್ಯೂಸ್
ಸ್ಪೇನ್ ದೇಶದಿಂದ ರೋಮ್ ನಗರಕ್ಕೆ ಪವಿತ್ರ ಯಾತ್ರೆಯನ್ನು ಕೈಗೊಂಡಿರುವ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಪವಿತ್ರ ಯಾತ್ರೆಗೆ ಮೌನ, ಶುಭಸಂದೇಶದ ಅಗತ್ಯವಿದೆ" ಎಂದು ಹೇಳಿದ್ದಾರೆ.
ಸಂತಿಯಾಗೋಗೆ (ಸಂತ ಯಾಗಪ್ಪರ ಸಮಾಧಿ) ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ಕಳೆದ ಹಲವು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ನನ್ನ ನಿಕಟಪೂರ್ವ ವಿಶ್ವಗುರುಗಳಾದ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಹಾಗೂ ಪೋಪ್ ಹದಿನಾರನೇ ಬೆನೆಡಿಕ್ಟರು ಇಲ್ಲಿಗೆ ಭೇಟಿ ನೀಡಿದ್ದರು" ಎಂದು ಹೇಳಿದ್ದಾರೆ.
ಯಾತ್ರಿಕರ ಹೆಚ್ಚಳದ ಸಕಾರಾತ್ಮಕ ಅಂಶವನ್ನು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಾಗ, ಅವರು ಈ ಪ್ರಶ್ನೆಯನ್ನು ಮುಂದಿಟ್ಟರು: “ಕ್ಯಾಮಿನೊ ಡಿ ಸ್ಯಾಂಟಿಯಾಗೊದಲ್ಲಿ ನಡೆಯುವ ಜನರು ನಿಜವಾಗಿಯೂ ತೀರ್ಥಯಾತ್ರೆಯನ್ನು ಪ್ರಾರಂಭಿಸುತ್ತಾರೆಯೇ? ಅಥವಾ ಇನ್ನೇನಾದರೂ ಇದೆಯಾ?”
ಅಪೊಸ್ತಲರ ಸಮಾಧಿಗಳಿಗೆ ಕ್ರಿಶ್ಚಿಯನ್ ತೀರ್ಥಯಾತ್ರೆಯನ್ನು ವ್ಯಾಖ್ಯಾನಿಸುವ ಮೂರು ಚಿಹ್ನೆಗಳನ್ನು ಅವರು ಸೂಚಿಸಿದರು. ಮೊದಲನೆಯದು ಮೌನ. "ಮೌನವಾಗಿ ನಡೆಯುವುದರಿಂದ ಒಬ್ಬನು ಕೇಳಲು, ಹೃದಯದಿಂದ ಕೇಳಲು, ಮತ್ತು ನಾವು ನಡೆಯುವಾಗ, ಹೃದಯವು ಹುಡುಕುವ ಉತ್ತರಗಳನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಅವರು ವಿವರಿಸಿದರು.
ಪೋಪ್ ಫ್ರಾನ್ಸಿಸ್ ಅವರು ಅಂತಿಮವಾಗಿ ಯಾತ್ರಾರ್ಥಿಗಳಿಗಾಗಿ ಪ್ರಾರ್ಥಿಸಿದರು.