ಪೋಪ್ ಫ್ರಾನ್ಸಿಸ್: ಗುರುಗಳ ತರಭೇತಿ ಎಂಬುದು ಕ್ರಿಸ್ತರೆಡೆಗಿನ ಪವಿತ್ರ ಯಾತ್ರೆಯಾಗಿದೆ

ಪೋಪ್ ಫ್ರಾನ್ಸಿಸ್ ಅವರು ಯಾಜಕ ತರಭೇತಿಯನ್ನು ಪಡೆಯುತ್ತಿರುವ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಗುರುಗಳ ತರಭೇತಿ ಎಂಬುದು ಕ್ರಿಸ್ತರೆಡೆಗಿನ ಪವಿತ್ರ ಯಾತ್ರೆಯಾಗಿದೆ ಎಂದು ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಯಾಜಕ ತರಭೇತಿಯನ್ನು ಪಡೆಯುತ್ತಿರುವ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅವರು ಗುರುಗಳ ತರಭೇತಿ ಎಂಬುದು ಕ್ರಿಸ್ತರೆಡೆಗಿನ ಪವಿತ್ರ ಯಾತ್ರೆಯಾಗಿದೆ ಎಂದು ಹೇಳಿದ್ದಾರೆ.

ಗುರುವಾರ ಪೋಪ್ ಫ್ರಾನ್ಸಿಸ್ ಅವರು ಸಂತಿಯಾಗೋ ದೆ ಕಂಪೋಸ್ಟಾಲ, ತುಯಿ ವೇಗೋ, ಹಾಗೂ ಮೊಂಡೊನೇಡೋ-ಫೆರೋಲೊ ಧರ್ಮಕ್ಷೇತ್ರಗಳ ಗುರು ಅಭ್ಯರ್ಥಿಗಳು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಈ ಇವರಿಗೆ ಯಾಜಕ ತರಭೇತಿಯನ್ನು ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

"ನೀವು ಎಲ್ಲಾ ಸಂದರ್ಭದಲ್ಲಿಯೂ ನೀವು ಪ್ರಭುವಿನ ಶುಭ ಸಂದೇಶವನ್ನು ಸಾರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನೀವು ನಿಮ್ಮ ಹೃದಯಗಳನ್ನು ಪ್ರಭುವಿಗೆ ತೆರೆಯಬೇಕು. ಧೈರ್ಯದಿಂದ ಶುಭಸಂದೇಶವನ್ನು ಸಾರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

12 December 2024, 16:18