ಪೋಪ್ ಫ್ರಾನ್ಸಿಸ್: ಧಾರ್ಮಿಕ ಬದುಕು ಇತರರ ಮೂಲಕ ನಮ್ಮನ್ನೇ ದೇವರಿಗೆ ಅರ್ಪಿಸಿಕೊಳ್ಳುವುದು

ಧಾರ್ಮಿಕ ಬದುಕಿನಲ್ಲಿ ಬಡತನ ಎಂಬುದು ನಮ್ಮನ್ನು ದೇವರೊಂದಿಗೆ ಹಾಗೂ ಇತರರೊಂದಿಗೆ ಬೆಸೆಯುವ ಮಹಾ ಸಂಪರ್ಕವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಕ್ಯಾನೊನೆಸ್ ಸಿಸ್ಟರ್ಸ್ ಆಫ್ ದಿ ಹೋಲಿ ಸ್ಪಿರಿಟ್ ಸಭೆಯ ಸದಸ್ಯರಿಗೆ ಸ್ಯಾಕ್ಸನಿಯಲ್ಲಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಧಾರ್ಮಿಕ ಬದುಕಿನಲ್ಲಿ ಬಡತನ ಎಂಬುದು ನಮ್ಮನ್ನು ದೇವರೊಂದಿಗೆ ಹಾಗೂ ಇತರರೊಂದಿಗೆ ಬೆಸೆಯುವ ಮಹಾ ಸಂಪರ್ಕವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಕ್ಯಾನೊನೆಸ್ ಸಿಸ್ಟರ್ಸ್ ಆಫ್ ದಿ ಹೋಲಿ ಸ್ಪಿರಿಟ್ ಸಭೆಯ ಸದಸ್ಯರಿಗೆ ಸ್ಯಾಕ್ಸನಿಯಲ್ಲಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಧಾರ್ಮಿಕ ಸಭೆಯ ಮೂಲೋದ್ಧೇಶವಾದ ಬಡವರ ಸೇವೆಯ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು, ತಮ್ಮ ಸಭೆಯ ಸ್ಥಾಪನೆಯ ಉದ್ದೇಶ ಹಾಗೂ ಧ್ಯೇಯಗಳ ಪ್ರಕಾರ ಧಾರ್ಮಿಕ ಬದುಕನ್ನು ಬಡತನ ಹಾಗೂ ಸರಳತೆಯಲ್ಲಿ ನಡೆಸುವಂತೆ ಅವರಿಗೆ ಕಿವಿಮಾತನ್ನು ಹೇಳಿದ್ದಾರೆ.

ಧಾರ್ಮಿಕ ಬದುಕಿನಲ್ಲಿ ಬಡತನವನ್ನು ಆಳವಡಿಸಿಕೊಳ್ಳುವುದು ಇತರರೊಂದಿಗೆ ಸಹಭಾಗಿತ್ವ ಸಾಧ್ಯವಾಗುವಂತೆ ಮಾಡುತ್ತದೆ. ಪರಮ ತ್ರಿತ್ವದ ಮನೆಯಲ್ಲಿ ನಾವೆಲ್ಲರೂ ಅತಿಥಿಗಳಾಗಿದ್ದು, ಸೇವೆಗೆ ಆರಿಸಲ್ಪಟ್ಟಿರುವ ನಮಗೆ ಬಡವರೊಂದಿಗೆ ಜೀವಿಸುವ ಕರೆ ಇದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಕ್ಯಾನೊನೆಸ್ ಭಗಿನಿಯರಿಗೆ ಹೇಳಿದರು.

ನಮ್ಮ ಸಹೋದರ ಸಹೋದರಿಯರೊಂದಿಗೆ ಸಹಭಾಗಿತ್ವದಲ್ಲಿ ನಾವು ಮುಂದುವರೆಯಬೇಕು. ಬದುಕಿನಲ್ಲಿ ಬಡತನ ಎಂಬುದು ನಮ್ಮನ್ನು ದೇವರೊಂದಿಗೆ ಹಾಗೂ ಇತರರೊಂದಿಗೆ ಬೆಸೆಯುವ ಮಹಾ ಸಂಪರ್ಕವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಕ್ಯಾನೊನೆಸ್ ಸಿಸ್ಟರ್ಸ್ ಆಫ್ ದಿ ಹೋಲಿ ಸ್ಪಿರಿಟ್ ಸಭೆಯ ಸದಸ್ಯರಿಗೆ ಸ್ಯಾಕ್ಸನಿಯಲ್ಲಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ಧಾರ್ಮಿಕ ಬದುಕು ಎಂಬುದು ಪವಿತ್ರಾತ್ಮರ ನೆರವಿನಿಂದ ದೇವರೆಡೆಗೆ ಪಯಣಿಸುವ ಪ್ರಯಾಣವಾಗಿದೆ" ಎಂದು ಹೇಳಿದರು.

05 December 2024, 15:02