ಹುಡುಕಿ

ಪೋಪ್ ಫ್ರಾನ್ಸಿಸ್: ನೀತಿಯ ಸಮಾಜವನ್ನು ಕಟ್ಟಲು ಸಂತ ಲೂಸಿ ನಮಗೆ ಸದ್ಗುಣವನ್ನು ಕಲಿಸುತ್ತಾರೆ

ತನ್ನ ಪಾಲಕಿ ಸಂತ ಲೂಸಿ ಅವರಿಗೆ ಮುಂದಿನ ವರ್ಷವನ್ನು ಸಮರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಿಸಿಲಿಯ ಸಿರಾಕುಸ್ ಮಹಾಧರ್ಮಕ್ಷೇತ್ರದ ಗುರುಗಳು ಹಾಗೂ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಂತ ಲೂಸಿ ಅವರ ಬಲಿದಾನವು ನಾವು ನೀತಿಯ ಸಮಾಜವನ್ನು ಕಟ್ಟಲು ನಮಗೆ ಸದ್ಗುಣಗಳನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ತನ್ನ ಪಾಲಕಿ ಸಂತ ಲೂಸಿ ಅವರಿಗೆ ಮುಂದಿನ ವರ್ಷವನ್ನು ಸಮರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಿಸಿಲಿಯ ಸಿರಾಕುಸ್ ಮಹಾಧರ್ಮಕ್ಷೇತ್ರದ ಗುರುಗಳು ಹಾಗೂ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಂತ ಲೂಸಿ ಅವರ ಬಲಿದಾನವು ನಾವು ನೀತಿಯ ಸಮಾಜವನ್ನು ಕಟ್ಟಲು ನಮಗೆ ಸದ್ಗುಣಗಳನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

ಸಿರಕೂಸ್ ನಗರದಲ್ಲಿ ಸಂತ ಲೂಸಿ ಜನಿಸಿದರು. ಇವರ ಕಣ್ಣುಗಳನ್ನು ಕಿತ್ತು, ಹಿಂಸಿಸಿ, ಅವರನ್ನು ಕೊಲ್ಲಲಾಗಿತ್ತು. ಅಂದಿನಿಂದ ಈವರೆಗೂ ಸಂತ ಲೂಸಿ ಅವರನ್ನು ಇಲ್ಲಿ ಗೌರವಿಸಿ, ಅವರ ಮಧ್ಯಸ್ಥಿಕೆಯ ಪ್ರಾರ್ಥನೆಗಳನ್ನು ಭಕ್ತಾಧಿಗಳು ಬೇಡುತ್ತಾರೆ. ಸಿರಾಕೂಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಫ್ರಾಂಚೆಸ್ಕೊ ಲೊಮಾಂತೊ ಅವರು ತಮ್ಮ ಮಹಾಧರ್ಮಕ್ಷೇತ್ರದಲ್ಲಿ 2025 ರ ವರ್ಷವನ್ನು ಸಂತ ಲೂಸಿ ಅವರ ವರ್ಷವೆಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು, ಗುರುಗಳು ಹಾಗೂ ಭಕ್ತಾಧಿಗಳಿಗೆ ಪತ್ರವನ್ನು ಬರೆದಿದ್ದು "ನೀವೆಲ್ಲರೂ ಅಷ್ಟಾಗಿ ಪ್ರೀತಿಸುವ ಸಂತ ಲೂಸಿ ಅವರ ಹೆಸರೇ ಬೆಳಕಾಗಿದೆ. ಇದು ದೇವರು ಬೆಳಕಾಗಿದ್ದಾರೆ ಎಂಬುದನ್ನು ಮತ್ತೆ ನಮಗೆ ನೆನಪಿಸುತ್ತದೆ. ದೇವರಲ್ಲಿ ಕತ್ತಲೆಂಬುದು ಇಲ್ಲ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ಅವರು ಈ ಜನತೆಗೆ ಸ್ಪೂರ್ತಿಯನ್ನು ತುಂಬಿದ್ದಾರೆ.

ಮುಂದುವರೆದು ತಮ್ಮ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತ ಲೂಸಿ ಅವರು ಮಹಿಳೆಯರು ಧರ್ಮಸಭೆಗೆ ನೀಡಿರುವ ಕೊಡುಗೆಗೆ ಸಾಕ್ಷಿಯಾಗಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಸಂತ ಲೂಸಿ ಅವರ ಬಲಿದಾನವು ನಮಗೆ ಕರುಣೆಯನ್ನು ಹಾಗೂ ಸ್ಪಂದಿಸುವ ಮನೋಭಾವವನ್ನು ಕಲಿಸುತ್ತದೆ ಎಂದು ಅವರು ಹೇಳಿದ್ದಾರೆ.

13 December 2024, 15:28