ಹುಡುಕಿ

ವಿದ್ಯಾರ್ಥಿಗಳಿಗೆ ಪೋಪ್: ನಿಮ್ಮೆಲ್ಲರಿಗೂ ಜಗತ್ತನ್ನು ಬದಲಾಯಿಸುವ ಶಕ್ತಿಯಿದೆ

ರೋಮ್ ನಗರದ ವಿದ್ಯಾರ್ಥಿಗಳಿಗೆ ಕಳುಹಿಸಿರುವ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನೀವೆಲ್ಲರೂ ಏನಾದರೂ ಒಂದು ಹೊಸತನವನ್ನು ಈ ಜಗತ್ತಿಗೆ ತರುತ್ತೀರಿ" ಎಂದು ಹೇಳಿದ್ದಾರೆ.

ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್

ರೋಮ್ ನಗರದ ವಿದ್ಯಾರ್ಥಿಗಳಿಗೆ ಕಳುಹಿಸಿರುವ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನೀವೆಲ್ಲರೂ ಏನಾದರೂ ಒಂದು ಹೊತನವನ್ನು ಈ ಜಗತ್ತಿಗೆ ತರುತ್ತೀರಿ" ಎಂದು ಹೇಳಿದ್ದಾರೆ.

ಇಟಲಿಯ ಕ್ರೈಸ್ತ ಕಾರ್ಮಿಕರ ಯೂನಿಯನ್ ಮಂಗಳವಾರ ಯುವಕರನ್ನು ಕೆಲಸದ ಪ್ರಪಂಚಕ್ಕೆ ಪರಿಚಯಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇವರಿಗೆ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು "ಈ ಜಗತ್ತು ನಿಮ್ಮ ಮುಂದೆ ತೆರೆಯಲ್ಪಡುತ್ತಿದೆ" ಎಂದು ಹೇಳಿದ್ದಾರೆ. 

"ನೀವು ಕೆಲಸಕ್ಕೆ ಮೊದಲ ಬಾರಿಗೆ ಬಂದಾಗ ಈ ಪ್ರದೇಶ ಜನರಿಂದ ತುಂಬಿ ಹೋಗಿರುವ, ಸದಾ ದಟ್ಟಣೆಯಿರುವ ಪ್ರದೇಶ ಎಂದು ನಿಮಗೆ ಅನಿಸಬಹುದು. ಆದರೆ, ಇದಕ್ಕೆ ನಿಮ್ಮ ಕೊಡುಗೆಯ ಅವಶ್ಯಕತೆ ಇದೆ. ನಿಮಗೆಲ್ಲರಿಗೂ ಈ ಜಗತ್ತಿಗೆ ಏನಾದರೂ ಒಂದು ಹೊಸತನವನ್ನು ತರುವ ಶಕ್ತಿಯಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಹೃದಯದ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು " ನಾವು ಸಾದಾರಣವಾಗಿ ಹೃದಯವನ್ನು ಪ್ರೀತಿಸಲು ಹಾಗೂ ವಿಶ್ವಾಸಿಸಲು ಉಪಯೋಗಿಸುತ್ತೇವೆ. ಆದರೆ, ಕೆಲಸ ಮಾಡಲೂ ಸಹ ನಾವು ನಮ್ಮ ಹೃದಯವನ್ನು ಉಪಯೋಗಿಸುತ್ತೇವೆ" ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ಮಾನವ ಹೃದಯಕ್ಕೆ ಭರವಸೆಯನ್ನು ನೀಡುವ ಶಕ್ತಿಯಿದೆ. ನಮ್ಮನ್ನು ಬಿಡುಗಡೆಗೊಳಿಸುವ ಎಲ್ಲಾ ಕಾರ್ಯಗಳು ಹೃದಯದಿಂದ ಆರಂಭವಾಗುತ್ತವೆ ಎಂದು ಅವರು ಅಂತಿಮವಾಗಿ ಹೇಳಿದ್ದಾರೆ.   

17 December 2024, 15:10